ಬೆಂಗಳೂರು : ಮನೆಯಲ್ಲಿ ಹೆಂಗಸರು ಕೂದಲು ಬಾಚಿಕೊಳ್ಳುವಾಗ ಎಲ್ಲೆಂದರಲ್ಲಿ ತಮ್ಮ ಕೂದಲನ್ನ ಬಾಚಿಕೊಂಡು ನಂತರ ಉದುರಿದ ಕೂದಲನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇದರಿಂದ ಮನೆಗೆ ದರಿದ್ರ ಸುತ್ತಿಕೊಲ್ಳುತ್ತದೆಯಂತೆ.
ಹೌದು. ಹೆಂಗಸರು ತಲೆ ಬಾಚಿಕೊಂಡಾಗ ನೆಲದ ಮೇಲೆ ಕೂದಲುಗಳು ಉದುರುತ್ತವೆ. ನಂತರ ಕೂದಲುಗಳು ಗಾಳಿಗೆ ಸುತ್ತಾಡಿ ಅಲೆದಾಡಿ ಮನೆಯ ಮೂಲೆಗಳಿಗೆ ಸೇರಿಬಿಡುತ್ತವೆ, ಹೀಗೆ ಮೂಲೆ ಗುಂಪಾದ ಕೂದಲಿಂದ ನಿಮ್ಮ ಮನೆಗೆ ದಾರಿದ್ರ್ಯ ಸುತ್ತಿ ಕೊಳ್ಳುತ್ತದೆ, ಆದ್ದರಿಂದ ಒಂದು ಪದ್ದತಿಯ ಪ್ರಕಾರ ಕೂದಲನ್ನ ಬಾಚಿಕೊಂಡು, ಉದುರಿದ ಕೂದಲನ್ನ ಸರಿಯಾದ ಕ್ರಮದಲ್ಲಿ ವಿಸರ್ಜಿಸ ಬೇಕು, ಸಾಧ್ಯವಾದರೆ ಉದುರಿದ ಕೂದಲನ್ನ ಮಣ್ಣಿನಲ್ಲಿ ಹೂತಿಡ ಬೇಕಂತೆ.
ಹಾಗೇ ಇದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ಅದೇನೆಂದರೆ ಒಂದು ವೇಳೆ ಕೂದಲನ್ನ ಸರಿಯಾದ ಕ್ರಮದಲ್ಲಿ ವಿಸರ್ಜಿಸದಿದ್ದರೆ, ಉದುರಿದ ಕೂದಲು ತಿನ್ನು ಅಡುಗೆ ಅಥವ ಆಹಾರದಲ್ಲಿ ಸೇರಿಕೊಂಡರೆ ಅದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.