Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಟ್ಟಿದರೆ ಮುನಿ, ಔಷಧಗಳ ಗಣಿ

ಮುಟ್ಟಿದರೆ ಮುನಿ, ಔಷಧಗಳ ಗಣಿ
ಬೆಂಗಳೂರು , ಬುಧವಾರ, 24 ಅಕ್ಟೋಬರ್ 2018 (17:16 IST)
ಸಾಮಾನ್ಯವಾಗಿ ನಮ್ಮಲ್ಲಿ ಹಲವರಿಗೆ ಹಿತ್ತಲಗಿಡ ಮದ್ದಲ್ಲ ಎಂದೇ ಭಾವನೆ. ನಮ್ಮ ನಮ್ಮ ಮನೆಯಂಗಳದಲ್ಲಿ ಬೆಳೆಯುವ ಎಷ್ಟೋ ಗಿಡಗಳು ಮಾನವನ ಆರೋಗ್ಯಕ್ಕೆ ಬೇಕಾಗುವ ಔಷಧೀಯ ಗುಣಗಳನ್ನು ಹೊಂದಿರುತ್ತವೆ ಎಂಬ ವಿಷಯವನ್ನೇ ಮರೆತಿರುತ್ತೇವೆ. ಅಂತಹ ಗಿಡಗಳ ಸಾಲಿಗೆ 'ಮುಟ್ಟಿದರೆ ಮುನಿ' ಗಿಡವೂ ಕೂಡಾ ಸೇರಿಕೊಳ್ಳುತ್ತದೆ. ಹೆಸರೇ ಹೇಳುವಂತೆ ಈ ಗಿಡದ ಎಲೆಗಳು ಮುಟ್ಟಿದರೆ ಮುದುಡಿಕೊಳ್ಳುತ್ತವೆ. ಇಂಗ್ಲಿಷ್‌ನಲ್ಲಿ ಇದಕ್ಕೆ ಟಚ್ ಮಿ ನಾಟ್ ಎಂದೇ ಹೆಸರು. 
ಈ ಗಿಡದ ಎಲೆಗಳು ಮುದುಡಿಕೊಳ್ಳುವುದು ಕೂಡಾ ಒಂದು ನೈಸರ್ಗಿಕ ಪ್ರಕ್ರಿಯೆ. ಈ ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿರುತ್ತವೆ ಅಷ್ಟೇ ಅಲ್ಲದೇ ಹುಳಹುಪ್ಪಟೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಒಂದು ಬಗೆ ಅಷ್ಟೇ. ಸುಮಾರಾಗಿ ಹಳ್ಳಿಕಡೆಗಳಲ್ಲಿ ಹೇರಳವಾಗಿ ಕಂಡುಬರುವ ಈ ಗಿಡಕ್ಕೆ ರಕ್ತಬೀಜಾಸುರನ ಸಂತತಿ ಎಂದೂ ಕರೆಯುವುದುಂಟು. ಏಕೆಂದರೆ ಗಾಳಿಯಲ್ಲಿ ಇದರ ಬೀಜಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಾರಿದರೂ ಒಂದು ಸಾವಿರಕ್ಕೂ ಅಧಿಕವಾಗಿ ಗಿಡಗಳು ಬೆಳೆಯುತ್ತವೆ. 
 
* ಬಾವುಗಳಾಗಿದ್ದರೆ ಮುಟ್ಟಿದರೆ ಮುನಿ ಗಿಡವನ್ನು ಅರೆದು ಅದನ್ನು ಬಾವಿರುವ ಜಾಗದಲ್ಲಿ ಕಾಟನ್ ಬಟ್ಟೆಯಿಂದ ಸುತ್ತಿ ಕಟ್ಟಿದರೆ ಬಾವು ಬಹು ಬೇಗನೆ ನಿವಾರಣೆಯಾಗುತ್ತದೆ.
 
* ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಕುಡಿಯುವುದರಿಂದ ಮಲಬದ್ದತೆಯು ಶಮನವಾಗುತ್ತದೆ.
 
* ಮುಟ್ಟಿದರೆ ಮುನಿ ಗಿಡವನ್ನು ಜಜ್ಜಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯ ಮಾಡಿ ಕುಡಿದರೆ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೇ ಮೂಲವ್ಯಾಧಿಯು ಗುಣಮುಖವಾಗುತ್ತದೆ.
 
* ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಕುಡಿಯುವುದರಿಂದ ಮಂಡಿನೋವು, ಮಂಡಿಊತ, ಮೂತ್ರಪಿಂಡ ಹಾಗೂ ಲಿವರ್‌ನ ತೊಂದರೆಗೆ ಉತ್ತಮ ಔಷಧವಾಗಿದೆ.
 
* ಮಹಿಳೆಯರಲ್ಲಿ ಅಧಿಕವಾಗಿ ರಕ್ತಸ್ರಾವವಾಗುವ ಸಮಸ್ಯೆ ಇದ್ದರೆ ಮುಟ್ಟಿದರೆ ಮುನಿ ಗಿಡದ ಕಷಾಯ ಕುಡಿದರೆ ನಿಧಾನವಾಗಿ ಆ ರಕ್ತನಾಳಗಳು ಸಂಕುಚಿತಗೊಂಡು ಸಮಸ್ಯೆಯು ಪರಿಹಾರವಾಗುತ್ತದೆ.
 
* ಮುಟ್ಟಿದರೆ ಮುನಿ ಗಿಡದ ರಸವನ್ನು ಮೊಡವೆ ಕಲೆಗಳಿರುವ ಜಾಗಕ್ಕೆ ಲೇಪಿಸಿದರೆ ಮೊಡವೆಗಳು ನಿವಾರಣೆಯಾಗುತ್ತದೆ.
 
* ಏನಾದರೂ ತರುಚಿ ಗಾಯಗಳಾಗಿ ರಕ್ತ ಸೋರಿಕೆಯಾಗುತ್ತಿದ್ದರೆ ಮುಟ್ಟಿದರೆ ಮುನಿ ಗಿಡದ ರಸವನ್ನು ಹಚ್ಚುವುದರಿಂದ ರಕ್ತಸ್ರಾವ ನಿಲ್ಲುತ್ತದೆ.
 
* ತುರಿಕೆ ಮತ್ತು ಇತರೆ ಚರ್ಮ ಸಂಬಂಧಿ ಖಾಯಿಲೆಗಳಿಗೆ ಮುಟ್ಟಿದರೆ ಮುನಿ ಗಿಡದ ರಸವನ್ನು ಹಚ್ಚುವುದರಿಂದ ಚರ್ಮರೋಗವು ನಿವಾರಣೆಯಾಗುತ್ತದೆ.
 
* ಕಾಲರಾ, ಸಾಮಾನ್ಯವಾದ ವಾಂತಿ ಭೇಧಿಗೂ ಮುಟ್ಟಿದರೆ ಮುನಿ ಗಿಡದ ರಸದ ಸೇವನೆಯು ಉತ್ತಮವಾದ ಔಷಧಿಯಾಗಿದೆ.
 
* ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಒಂದು ಲೋಟ ನೀರಿಗೆ ಈ ಪುಡಿಯನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.
 
* ಬಾಣಂತಿಯರ ಹೊಟ್ಟೆ ಕರಗಿಸಿ ಮೊದಲಿನಂತಾಗಿಸಲು ಮುಟ್ಟಿದರೆ ಮುನಿ ಗಿಡವು ಸಹಕಾರಿಯಾಗಿದೆ. ಮುಟ್ಟಿದರೆ ಮುನಿ ಗಿಡದ ಸೊಪ್ಪಿನ ರಸವನ್ನು ಹೊಟ್ಟೆಯ ಭಾಗಕ್ಕೆ ಲೇಪಿಸಿ ಒಂದೆರಡು ನಿಮಿಷ ಮಸಾಜ್ ಮಾಡಿಕೊಂಡರೆ ಬಾಣಂತಿಯರಿಗೆ ದಪ್ಪಗಿರುವ ಹೊಟ್ಟೆ ಕರಗುತ್ತದೆ. 
 
* ಪುರುಷರಲ್ಲಿ ಕಂಡುಬರುವ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಗೆ ಮುಟ್ಟಿದರೆ ಮುನಿ ಗಿಡವು ಸಹಾಯ ಮಾಡುತ್ತದೆ. 
 
* ಮಹಿಳೆಯರಲ್ಲಿಯೂ ಗರ್ಭಾಶಯ ಜಾರುವ, ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆಗೂ ಮುಟ್ಟಿದರೆ ಮುನಿ ಗಿಡದ ಕಷಾಯವು ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ. 
 
* ರಕ್ತಭೇಧಿ, ಐಬಿಎಸ್, ಕ್ರೋನ್ಸ್ ಡಿಸೀಸ್‌ಗಳ ನಿರ್ವಹಣೆಯಲ್ಲಂತೂ ಮುಟ್ಟಿದರೆ ಮುನಿ ಗಿಡವು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಿನ ಸಮಯದಲ್ಲಿ ಬಿಸಿ ನೀರಿನ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು