Publish Date: Sun, 15 Nov 2020 (11:58 IST)
Updated Date: Sun, 15 Nov 2020 (11:59 IST)
ನವದೆಹಲಿ: ದೀಪಾವಳಿಗೆ ಪಟಾಕಿ ಹಚ್ಚದೇ ದೀಪ ಹಚ್ಚಿ ಸಿಹಿ ಹಂಚಿ ದೀಪಾವಳಿ ಮಾಡಿ ಎಂದು ಕರೆಕೊಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ನಿಮ್ಮನ್ನು ನಾವು ಆರಾಧಿಸುತ್ತೇವೆ ಎಂದ ಮಾತ್ರಕ್ಕೆ ಧಾರ್ಮಿಕ ನಾಯಕನಂತೆ ನೀವು ಉಪದೇಶ ಮಾಡಿದ್ದನ್ನೆಲ್ಲಾ ಕೇಳಬೇಕೆಂದು ಅರ್ಥವಲ್ಲ ಎಂದು ಕೆಲವರು ಟೀಕಿಸಿದರೆ ಮತ್ತೆ ಕೆಲವರು ಕೆಲವರಿಗೆ ದೀಪಾವಳಿ ಬಂದೊಡನೇ ಇದೊಂದು ಬಿಟ್ಟಿ ಉಪದೇಶ ಕೊಡುವುದು ಮಾಮೂಲಾಗಿಬಿಟ್ಟಿದೆ ಎಂದು ಟಾಂಗ್ ಕೊಟ್ಟಿದ್ದಾರೆ.