Publish Date: Sun, 15 Nov 2020 (09:30 IST)
Updated Date: Sun, 15 Nov 2020 (09:32 IST)
ಮುಂಬೈ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಬ್ಬದ ಶುಭಾಶಯ ಕೋರಿರುವ ಕೊಹ್ಲಿ ಪಟಾಕಿ ಹಚ್ಚಿ ಪರಿಸರ ಮಾಲಿನ್ಯ ಮಾಡಬೇಡಿ. ಯಾರಿಗೂ ತೊಂದರೆ ಕೊಡದೇ ದೀಪ ಹಚ್ಚಿ, ಸಿಹಿ ತಿಂದು ದೀಪಾವಳಿ ಹಬ್ಬವನ್ನು ಕುಟುಂಬ ಸಮೇತರಾಗಿ ಸಂಭ್ರಮಾಚರಿಸಿ ಎಂದು ಕರೆ ನೀಡಿದ್ದಾರೆ.