Publish Date: Sun, 15 Nov 2020 (09:47 IST)
Updated Date: Sun, 15 Nov 2020 (09:48 IST)
ಸಿಡ್ನಿ: ಆಸ್ಟ್ರೇಲಿಯಾ ಸರಣಿಗಾಗಿ ಕಾಂಗಾರೂ ನಾಡಿಗೆ ಬಂದಿಳಿದಿರುವ ಟೀಂ ಇಂಡಿಯಾ ತಕ್ಷಣದಿಂದಲೇ ಅಭ್ಯಾಸ ಆರಂಭಿಸಿದೆ.
ಐಪಿಎಲ್ ಸಂದರ್ಭದಲ್ಲಿ ಜೈವಿಕ ಸುರಕ್ಷಾ ವಲಯದಲ್ಲಿದ್ದ ಕಾರಣ ಕ್ರಿಕೆಟಿಗರು ದುಬೈ ಮಾರ್ಗವಾಗಿ ಆಸ್ಟ್ರೇಲಿಯಾ ತಲುಪಿದ ತಕ್ಷಣವೇ ಕೊರೋನಾ ಪರೀಕ್ಷೆಗೊಳಗಾಗಿದ್ದು, ನೆಗೆಟಿವ್ ವರದಿ ಬಂದ ಹಿನ್ನಲೆಯಲ್ಲಿ ಅಭ್ಯಾಸಕ್ಕೆ ಹಾಜರಾಗಿದ್ದಾರೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಕ್ರಿಕೆಟಿಗರು ನೆಟ್ ಪ್ರಾಕ್ಟೀಸ್ ಗಾಗಿ ಒಟ್ಟು ಸೇರುತ್ತಿದ್ದಾರೆ.