ಬೆಂಗಳೂರು: ಈ ದೀಪಾವಳಿಗೆ ಪರಿಸರಕ್ಕೆ ಅಷ್ಟೊಂದು ಹಾನಿಕಾರಕವಲ್ಲದ ಹಸಿರು ಪಟಾಕಿಗಳನ್ನು ಸಿಡಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಇದರಿಂದ ಅನಾಹುತವೇ ಆಗಲ್ಲ ಎಂದು ಅರ್ಥವಲ್ಲ.
ಹಸಿರು ಪಟಾಕಿಯಿಂದಲೂ ಅನಾಹುತ ತಪ್ಪಿದ್ದಲ್ಲ. ಹೀಗಾಗಿ ಇಂತಹ ಪಟಾಕಿಗಳನ್ನು ಸಿಡಿಸುವಾಗಲೂ ನಿಮ್ಮ ಕಣ್ಣು, ಮುಖ ಸೇರಿದಂತೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಹಸಿರು ಪಟಾಕಿಗಳಲ್ಲಿ ಹಾನಿಕಾರಕವಲ್ಲದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೂ ಸ್ಪೋಟದ ತೀವ್ರತೆ ಇತರ ಪಟಾಕಿಗಳಂತೇ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು.