Publish Date: Thu, 11 Mar 2021 (11:51 IST)
Updated Date: Thu, 11 Mar 2021 (11:52 IST)
ಅಹಮ್ಮದಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಮುದ್ದು ಮಗಳ ತಂದೆ ಕೂಡಾ. ತಮ್ಮ ಜೀವನದ ಈ ವಿಶೇಷ ಕ್ಷಣಗಳನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ.
ಫೋರ್ಬ್ಸ್ ಇಂಡಿಯಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅಪ್ಪನಾಗಿರುವ ಖುಷಿಯ ಬಗ್ಗೆ ಕೊಹ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತಾನು ತಂದೆಯಾದ ಬಳಿಕ ತನ್ನ ಜೀವನದಲ್ಲಾದ ಬದಲಾವಣೆಗಳ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.
ಇದೊಂದು ಅದ್ಭುತ ಅನುಭವ. ಆಸ್ಟ್ರೇಲಿಯಾ ಸರಣಿಯಿಂದ ಮರಳಿದ ಮೇಲೆ ನನ್ನ ಕೈಗೆ ಮಗಳು ಬಂದಳು. ಅದು ಜೀವನದ ಅತ್ಯಂತ ವಿಶೇಷ ಗಳಿಗೆ. ಜಗತ್ತಿನಲ್ಲಿ ಇದೊಂದನ್ನು ಬಿಟ್ಟು ಬೇರೆ ಏನನ್ನು ಬೇಕಾದರೂ ಮಿಸ್ ಮಾಡಿಕೊಳ್ಳುತ್ತಿದ್ದೆ. ಅದನ್ನು ಸ್ವತಃ ಅನುಭವಿಸದೇ ಆ ಖುಷಿಯನ್ನು ವಿವರಿಸಲು ಸಾಧ್ಯವಿಲ್ಲ. ನಾನು 17-18 ದಿನ ಕುಟುಂಬದಿಂದ ಬೇರೆ ಆಗಿ ಇರಬೇಕಿತ್ತು. ಅನುಷ್ಕಾಗೆ ಇದು ಎಷ್ಟು ಕಷ್ಟ ಎಂದು ನನಗೆ ಗೊತ್ತು. ಆದರೆ ಈಗ ನನ್ನ ಕುಟುಂಬ ನನ್ನ ಜೊತೆಗಿದೆ. ಈ ಪ್ರತಿಯೊಂದು ಕ್ಷಣವನ್ನೂ ನಾನು ಎಂಜಾಯ್ ಮಾಡುತ್ತಿದ್ದೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.