ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಚಿಯರ್ ಅಪ್ ಮಾಡಲು ಅವರ ಮಗಳು ವಮಿಕಾ ತನ್ನ ತಾಯಿ ಅನುಷ್ಕಾ ಜೊತೆ ಬಂದಿಳಿದಿದ್ದಾಳೆ.
ವಿರಾಟ್ ಪತ್ನಿ ಅನುಷ್ಕಾ ಅಹಮ್ಮದಾಬಾದ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜನವರಿ 11 ರಂದು ಜನಿಸಿದ ವಮಿಕಾಗೆ ಇದು ಅಪ್ಪನ ಜೊತೆ ಮೊದಲ ಕ್ರಿಕೆಟ್ ಟೂರ್.
ಆದರೆ ಅನುಷ್ಕಾ ವಮಿಕಾ ಫೋಟೋ ಇದುವರೆಗೆ ಹಂಚಿಕೊಂಡಿಲ್ಲ. ಕಳೆದ ಪಂದ್ಯದ ವೇಳೆಯೂ ಅನುಷ್ಕಾ ಪತಿಗೆ ಚಿಯರ್ ಅಪ್ ಮಾಡಲು ಅಹಮ್ಮದಾಬಾದ್ ಗೆ ಬಂದಿದ್ದರು. ಆದರೆ ಅಷ್ಟರಲ್ಲಿ ಟೆಸ್ಟ್ ಪಂದ್ಯವೇ ಮುಗಿದು ಹೋಗಿತ್ತು. ಆದರೆ ಈ ಬಾರಿ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ವಮಿಕಾ ಮೈದಾನಕ್ಕೆ ಬರುತ್ತಾರೆಯೇ ಎಂದು ಕಾದುನೋಡಬೇಕಿದೆ.