ನವದೆಹಲಿ: ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಮುಂಬೈ ಮುಖಾಮುಖಿಯಾಗಿದ್ದು, ಮುಂಬೈ ಪರ ಪೃಥ್ವಿ ಶಾ ಭರ್ಜರಿ ಶತಕ ಗಳಿಸಿ ಆಡುತ್ತಿದ್ದಾರೆ.
ಟಾಸ್ ಗೆದ್ದು ಕರ್ನಾಟಕ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ 91 ಎಸೆತಗಳಲ್ಲಿ 4 ಸಿಕ್ಸರ್, 13 ಬೌಂಡರಿಗಳೊಂದಿಗೆ 116 ರನ್ ಗಳಿಸಿ ಎದುರಾಳಿಗಳನ್ನು ಚೆಂಡಾಡುತ್ತಿದ್ದಾರೆ. ಇನ್ನೊಂದು ತುದಿಯಲ್ಲಿ ಶ್ಯಾಮ್ಸ್ ಮುಲಾನಿ 27 ರನ್ ಗಳಿಸಿ ಆಡುತ್ತಿದ್ದಾರೆ. ಮುಂಬೈ ಇತ್ತೀಚೆಗಿನ ವರದಿ ಬಂದಾಗ 30 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಆಡುತ್ತಿದೆ.
ಯಶಸ್ವಿ ಜೈಸ್ವಾಲ್ 6 ರನ್ ಗಳಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರೆ, ಆದಿತ್ಯ ತಾರೆ 16 ರನ್ ಗೆ ಗೌತಮ್ ಬೌಲಿಂಗ್ ನಲ್ಲಿ ಔಟಾಗಿದ್ದಾರೆ. ಇತ್ತ ಕರ್ನಾಟಕವೂ ಬ್ಯಾಟಿಂಗ್ ನಲ್ಲಿ ಸದೃಢವಾಗಿದೆ. ದೇವದತ್ತ್ ಪಡಿಕ್ಕಲ್ ಸತತ ನಾಲ್ಕು ಶತಕಗಳೊಂದಿಗೆ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ರವಿಕಾಂತ್ ಸಮರ್ಥ್ ಕೂಡಾ ಅವರಿಗೆ ತಕ್ಕ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಕರ್ನಾಟಕ ಕೂಡಾ ಮುಂಬೈಗೆ ತಕ್ಕ ಎದಿರೇಟು ಕೊಡಬಹುದು.