ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಂದ ಬಾಲ್ ಗೇ ಪೆವಿಲಿಯನ್ ಹಾದಿ ಹಿಡಿದಿದ್ದಾರೆ.
ಎರಡನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಫೋಕ್ಸ್ ಗೆ ಕ್ಯಾಚಿತ್ತು ಕೊಹ್ಲಿ ನಿರ್ಗಮಿಸಿದ್ದಾರೆ. ಇದರೊಂದಿಗೆ ಒಂದೇ ಸರಣಿಯಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿ ಕುಖ್ಯಾತಿಗೊಳಗಾಗಿದ್ದಾರೆ.
ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧವೇ 2014 ರ ಸರಣಿಯಲ್ಲಿ ಎರಡು ಬಾರಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಆವತ್ತು ಜೇಮ್ಸ್ ಆಂಡರ್ಸನ್ ಮತ್ತು ಲಿಯಾಂ ಫ್ಲಂಕೆಟ್ ಎರಡು ಬಾರಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಇದಾದ ಬಳಿಕ ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಅವರು ಶೂನ್ಯಕ್ಕೆ ಔಟಾಗಿದ್ದಾರೆ.
ಟೀಂ ಇಂಡಿಯಾಗೆ ಈಗ ಹಿಟ್ ಮ್ಯಾನ್ ರೋಹಿತ್ ಶರ್ಮಾನೇ ಆಸರೆ. 87 ಎಸೆತಗಳನ್ನು ಎದುರಿಸಿರುವ 22 ರನ್ ಗಳಿಸಿ ಆಡುತ್ತಿರುವ ರೋಹಿತ್ ಗೆ ಅಜಿಂಕ್ಯಾ ರೆಹಾನೆಗೆ 12 ಎಸೆತ ಎದುರಿಸಿದ್ದು ಈಗಷ್ಟೇ ಖಾತೆ ತೆರೆದಿದ್ದಾರೆ. ಭಾರತ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ. ಭಾರತ ಇನ್ನೂ 158 ರನ್ ಗಳಿಂದ ಹಿನ್ನಡೆಯಲ್ಲಿದೆ.