Publish Date: Mon, 19 Aug 2019 (09:30 IST)
Updated Date: Mon, 19 Aug 2019 (09:33 IST)
ಲಂಡನ್: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಷಸ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದ ವೇಳೆ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆದ ಬೌನ್ಸರ್ ನಿಂದಾಗಿ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದಾರೆ.
ಜೋಫ್ರಾ ಆರ್ಚರ್ ಎಸೆದ ವೇಗದ ಬೌನ್ಸರ್ ನೇರವಾಗಿ ಸ್ಮಿತ್ ಕುತ್ತಿಗೆಗೆ ಬಿದ್ದಿತ್ತು. ತಕ್ಷಣವೇ ನೆಲಕ್ಕೊರಗಿದ ಸ್ಮಿತ್ ನೋವಿನಿಂದ ಒದ್ದಾಡಿದರು. ಆದರೆ ಈ ವೇಳೆ ವೇಗಿ ಆರ್ಚರ್ ಸ್ಮಿತ್ ಕಡೆಗೆ ತಿರುಗಿಯೋ ನೋಡದೇ ಹೋಗಿದ್ದು ಟೀಕೆಗೊಳಗಾಗಿದೆ.
ಬಳಿಕ ಸ್ಮಿತ್ ರನ್ನು ಮೈದಾನದಿಂದ ಹೊರ ಕರೆತರಲಾಗಿದೆ. ಇದೀಗ ಪಂದ್ಯದ ಮುಂದಿನ ಭಾಗದಲ್ಲಿ ಸ್ಮಿತ್ ಆಡುತ್ತಿಲ್ಲ ಎಂದು ತಂಡದ ಮ್ಯಾನೇಜ್ ಮೆಂಟ್ ಹೇಳಿದೆ. ಹಿಂದೊಮ್ಮೆ ಇದೇ ರೀತಿ ಆಸ್ಟ್ರೇಲಿಯಾದವರೇ ಆದ ಪಿಲಿಪ್ ಹ್ಯೂಸ್ ಬೌನ್ಸರ್ ತಗುಲಿ ಮೈದಾನದಲ್ಲೇ ಸಾವನ್ನಪ್ಪಿದ್ದರು. ಈ ಘಟನೆ ಮತ್ತೆ ಅದನ್ನೇ ನೆನಪಿಸಿತು. ಅದೃಷ್ಟವಶಾತ್ ಸ್ಮಿತ್ ಗಂಭೀರ ಅಪಾಯದಿಂದ ಪಾರಾಗಿದ್ದಾರೆ.