Publish Date: Sun, 18 Aug 2019 (09:29 IST)
Updated Date: Sun, 18 Aug 2019 (09:32 IST)
ನವದೆಹಲಿ: ಕ್ರಿಕೆಟ್ ಬಿಟ್ಟು ಸೇನೆಯಲ್ಲಿ ಸೇವೆ ಸಲ್ಲಿಸಲು ಹೋಗಿದ್ದ ಕ್ರಿಕೆಟಿಗ ಧೋನಿ ಕಾಶ್ಮೀರದಿಂದ ಮರಳಿದ್ದಾರೆ. ಆಗಸ್ಟ್ 15 ಕ್ಕೆ ಅವರ ಕರ್ತವ್ಯದ ಅವಧಿ ಮುಗಿದಿದೆ.
ಆಗಸ್ಟ್ 15 ರವರೆಗೆ ಸುಮಾರು 15 ದಿನಗಳ ಕಾಲ ಧೋನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಸ್ತು ಪಡೆಯೊಂದಿಗೆ ಸಾಮಾನ್ಯ ಯೋಧರಂತೆ ಕರ್ತವ್ಯ ನಿರ್ವಹಿಸಿದ್ದರು. ಸ್ವಾತಂತ್ರ್ಯೋತ್ಸವದ ದಿನ ಸೇನಾ ಆಸ್ಪತ್ರೆಗೆ ತೆರಳಿ ಅಲ್ಲಿನ ರೋಗಿಗಳೊಂದಿಗೆ ಉಭಯ ಕುಶಲೋಪರಿ ನಡೆಸಿದ್ದರು.
ಇದೀಗ ಧೋನಿ ಕರ್ತವ್ಯ ಮುಗಿಸಿ ಮರಳುತ್ತಿದ್ದಾಗ ಲೇಹ್ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಸೇನೆಯ ಗೌರವಯುತ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿರುವ ಧೋನಿ ಮಿಲಿಟರಿ ತರಬೇತಿ ಜತೆಗೆ ಅಪ್ಪಟ ಯೋಧನಾಗಿ ಕರ್ತವ್ಯವನ್ನೂ ನಿಭಾಯಿಸಿ ಯೋಧರೊಂದಿಗೆ ಕೆಲವು ಕಾಲ ಮಹತ್ವಪೂರ್ಣ ಸಮಯ ಕಳೆದಿದ್ದಾರೆ.