Publish Date: Mon, 08 Feb 2021 (09:02 IST)
Updated Date: Mon, 08 Feb 2021 (09:04 IST)
ಚೆನ್ನೈ: ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಸುಲಭ ಕ್ಯಾಚ್ ಅವಕಾಶ ಕೈಚೆಲ್ಲಿದ ವಿಕೆಟ್ ಕೀಪರ್ ರಿಷಬ್ ಪಂತ್ ಮೇಲೆ ಅಸಮಾಧಾನಗೊಂಡ ರವಿಚಂದ್ರನ್ ಅಶ್ವಿನ್ ಇನಿಂಗ್ಸ್ ಮುಗಿದ ಬಳಿಕ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಶ್ವಿನ್ ಬೌಲಿಂಗ್ ನಲ್ಲಿ ಜ್ಯಾಕ್ ಲೀಚ್ ನೀಡಿದ ಕ್ಯಾಚ್ ನ್ನು ರಿಷಬ್ ಕೈ ಚೆಲ್ಲಿದ್ದರು. ಆಗಲೇ ಅಶ್ವಿನ್ ಅಸಮಾಧಾನ ತೋರ್ಪಡಿಸಿದ್ದರು. ಇಂಗ್ಲೆಂಡ್ ಇನಿಂಗ್ಸ್ ಮುಗಿಸಿ ಪೆವಿಲಿಯನ್ ಗೆ ಮರಳುವಾಗ ರಿಷಬ್ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ಅಶ್ವಿನ್ ಕ್ಯಾಚ್ ಹೇಗೆ ಹಿಡಿಯಬೇಕೆಂದು ಹೇಳಿಕೊಟ್ಟಿದ್ದರು.