Publish Date: Sun, 07 Feb 2021 (13:45 IST)
Updated Date: Sun, 07 Feb 2021 (13:47 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಕುಸಿತ ಕಂಡಿದೆ. ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿ ಸಂಕಷ್ಟದಲ್ಲಿದೆ.
ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 578 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ ಈ ಮೊತ್ತವನ್ನು ಬೆನ್ನತ್ತುವ ಹಾದಿಯಲ್ಲಿ ಟೀಂ ಇಂಡಿಯಾ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಬಂದಿದೆ. ಪ್ರಮುಖರೆಲ್ಲರೂ ಪೆವಿಲಿಯನ್ ಸೇರಿಯಾಗಿದೆ. ಸದ್ಯಕ್ಕೆ 38 ರನ್ ಗಳಿಸಿರುವ ಚೇತೇಶ‍್ವರ ಪೂಜಾರ ಮತ್ತು 34 ರನ್ ಗಳಿಸಿರುವ ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ರೋಹಿತ್ 6, ಶಬ್ನಂ ಗಿಲ್ 29, ವಿರಾಟ್ ಕೊಹ್ಲಿ 11, ಅಜಿಂಕ್ಯಾ ರೆಹಾನೆ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್, ಡೊಮಿನಿಕ್ ಬೆಸ್ ತಲಾ 2 ವಿಕೆಟ್ ಕಬಳಿಸಿದ್ದಾರೆ. ಭಾರತ ಇನ್ನೂ 459 ರನ್ ಗಳ ಹಿನ್ನಡೆಯಲ್ಲಿದೆ.