Publish Date: Sun, 07 Feb 2021 (10:40 IST)
Updated Date: Sun, 07 Feb 2021 (10:42 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಗಳಿಸಿದ 578 ರನ್ ಗಳಿಗೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ರೋಹಿತ್ ಶರ್ಮಾ ರೂಪದಲ್ಲಿ ಆಘಾತ ಸಿಕ್ಕಿದೆ.
ರೋಹಿತ್ ಕೇವಲ 6 ರನ್ ಗಳಿಸಿ ಜೋಫ್ರಾ ಆರ್ಚರ್ ಬೌಲಿಂಗ್ ನಲ್ಲಿ ಜೋಸ್ ಬಟ್ಲರ್ ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಇನ್ನೊಂದು ತುದಿಯಲ್ಲಿರುವ ಯುವ ಬ್ಯಾಟ್ಸ್ ಮನ್ ಶಬ್ನಂ ಗಿಲ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದು 12 ಎಸೆತಗಳಿಂದ 13 ರನ್ ಗಳಿಸಿದ್ದಾರೆ. ಇದೀಗ ಚೇತೇಶ‍್ವರ ಪೂಜಾರ ಕ್ರೀಸ್ ಗೆ ಬಂದಿದ್ದಾರೆ. ಭಾರತ 1 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದೆ.