Publish Date: Thu, 17 Dec 2020 (09:45 IST)
Updated Date: Thu, 17 Dec 2020 (09:46 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಅಡುವ ಬಳಗ ಪ್ರಕಟಿಸಿದಾಗ ಇನ್ ಫಾರ್ಮ್ ಬ್ಯಾಟ್ಸ್ ಮನ್ ಗಳನ್ನು ಬಿಟ್ಟು ಫಾರ್ಮ್ ಕಳೆದುಕೊಂಡಿರುವ ಪೃಥ್ವಿ ಶಾಗೆ ಮಣೆ ಹಾಕಿದಾಗಲೇ ಅಭಿಮಾನಿಗಳು ಆಕ್ಷೇಪಿಸಿದ್ದರು.
ಆಸ್ಟ್ರೇಲಿಯನ್ನರೇ ನಿಮಗೆ ಮೊದಲ ವಿಕೆಟ್ ಬೇಗನೇ ಗಿಫ್ಟ್ ಆಗಿ ಸಿಗುತ್ತೆ ಬಿಡಿ ಎಂದು ವ್ಯಂಗ್ಯ ಮಾಡಿದ್ದರು. ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿಲ್ಲ. ಮೊದಲ ಓವರ್ ನಲ್ಲೇ ಪೃಥ್ವಿ ಶಾ ಎರಡು ಎಸೆತ ಎದುರಿಸಿ ಶೂನ್ಯಕ್ಕೆ ಔಟಾಗಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಸ್ಕೋರ್ 1 ವಿಕೆಟ್ ನಷ್ಟಕ್ಕೆ 1 ರನ್ ಎಂಬಂತಾಗಿದೆ.