Publish Date: Wed, 18 Nov 2020 (09:59 IST)
Updated Date: Wed, 18 Nov 2020 (10:01 IST)
ಸಿಡ್ನಿ: ಆಸ್ಟ್ರೇಲಿಯಾ ಸರಣಿಗೆ ಕಾಂಗಾರೂ ನಾಡಿಗೆ ಬಂದಿಳಿದಿರುವ ಟೀಂ ಇಂಡಿಯಾ ಸದಸ್ಯರು ಕ್ವಾರಂಟೈನ್ ನಡುವೆಯೂ ಅಭ್ಯಾಸ ನಡೆಸುತ್ತಿದ್ದಾರೆ.
ಕೆಎಲ್ ರಾಹುಲ್ ಪಿಂಕ್ ಬಾಲ್ ನಲ್ಲಿ ಅಭ್ಯಾಸ ನಡೆಸುತ್ತಿರುವ ವಿಡಿಯೋ ಪ್ರಕಟಿಸಿದ್ದು, ಮತ್ತೆ ನೀಲಿ ಜೆರ್ಸಿ ಧರಿಸಿ ಟೀಂ ಇಂಡಿಯಾ ಪ್ರತಿಧಿಸುವುದು ಖುಷಿ ತಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ನಲ್ಲಿ ರಾಹುಲ್ ಪಾತ್ರ ಪ್ರಮುಖವಾಗಿರಲಿದೆ. ಹೀಗಾಗಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ.