Publish Date: Wed, 18 Nov 2020 (09:32 IST)
Updated Date: Wed, 18 Nov 2020 (09:33 IST)
ಮುಂಬೈ: ಲಾಕ್ ಡೌನ್ ಬಳಿಕ ಕ್ರಿಕೆಟ್ ಆರಂಭವಾಗಿದ್ದೇ ತಡ, ಟೀಂ ಇಂಡಿಯಾ ಫುಲ್ ಬ್ಯುಸಿಯಾಗಲಿದೆ. ಮುಂದಿನ ಒಂದು ವರ್ಷಕ್ಕೆ ಟೀಂ ಇಂಡಿಯಾಕ್ಕೆ ಬಿಡುವಿಲ್ಲದಷ್ಟು ಪಂದ್ಯಗಳಿವೆ.
ಆಸ್ಟ್ರೇಲಿಯಾ ಸರಣಿಯಿಂದ ಆರಂಭವಾಗಲಿರುವ ಎಕ್ಸ್ ಪ್ರೆಸ್ ಯಾತ್ರೆಯಲ್ಲಿ 14 ಟೆಸ್ಟ್ ಪಂದ್ಯಗಳು, 16 ಏಕದಿನ ಪಂದ್ಯಗಳು ಮತ್ತು 23 ಟಿ20 ಪಂದ್ಯಗಳಿರಲಿವೆ. ಇದರ ಜತೆಗೆ ಏಷ್ಯಾ ಕಪ್, ವಿಶ್ವಕಪ್ ಮತ್ತು ಐಪಿಎಲ್ ಪಂದ್ಯಗಳು ಬೇರೆ. ಒಟ್ಟಾರೆ ಮುಂದಿನ ಡಿಸೆಂಬರ್ 2021 ರವರೆಗೆ ಟೀಂ ಇಂಡಿಯಾ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಆಡಬೇಕಾಗಿದೆ.