Publish Date: Wed, 18 Nov 2020 (09:41 IST)
Updated Date: Wed, 18 Nov 2020 (09:43 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವೆಂದರೆ ಧೋನಿ ಎನ್ನುವಷ್ಟು ಅವರು ಆ ತಂಡದ ಜತೆಗೆ ಸಂಬಂಧ ಹೊಂದಿದ್ದಾರೆ. ಆದರೆ ಈ ಬಾರಿ ಅವರ ಕಳಪೆ ಪ್ರದರ್ಶನದ ಬಳಿಕ ಕೆಲವರು ಅವರನ್ನು ನಾಯಕತ್ವದಿಂದ ಕೈ ಬಿಡಬೇಕು ಎನ್ನಲು ಆರಂಭಿಸಿದ್ದಾರೆ.
ಆದರೆ ಕಾಮೆಂಟೇಟರ್ ಆಕಾಶ್ ಚೋಪ್ರಾ ಇನ್ನಷ್ಟು ಮುಂದುವರಿದಿದ್ದು, ಮುಂದಿನ ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ಧೋನಿಯನ್ನು ಸಿಎಸ್ ಕೆ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ನನ್ನ ಪ್ರಕಾರ ಸಿಎಸ್ ಕೆ ಮುಂದಿನ ಹರಾಜು ಪ್ರಕ್ರಿಯೆ ವೇಳೆ ಧೋನಿಯನ್ನು ಹರಾಜಿಗೊಳಪಡಿಸಬೇಕು. ಧೋನಿಗೆ ಈಗಾಗಲೇ 39 ವರ್ಷವಾಗಿದೆ. ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಹರಾಜು ನಡೆದರೆ ಆ ಆಟಗಾರರನ್ನು ಮೂರು ವರ್ಷ ಉಳಿಸಿಕೊಳ್ಳಬೇಕು. ಆದರೆ ಧೋನಿ ಇನ್ನು ಮೂರು ವರ್ಷ ಆಡುವರೇ? ಧೋನಿಯನ್ನು ಉಳಿಸಿಕೊಳ್ಳಬೇಡಿ ಎಂದು ನಾನು ಹೇಳುತ್ತಿಲ್ಲ, ಆದರೆ ಉಳಿಸಿಕೊಂಡರೆ ನೀವು 15 ಕೋಟಿ ರೂ. ನೀಡಬೇಕಾಗುತ್ತದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.