Publish Date: Wed, 18 Nov 2020 (09:51 IST)
Updated Date: Wed, 18 Nov 2020 (09:58 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಸದ್ಯಕ್ಕೆ ಕ್ವಾರಂಟೈನ್ ನಲ್ಲಿದ್ದಾರೆ. ಕ್ವಾರಂಟೈನ್ ವೇಳೆಯನ್ನು ತಾವು ಹೇಗೆ ಕಳೆಯುತ್ತಿದ್ದೇವೆ ಎಂಬುದನ್ನು ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕ್ವಾರಂಟೈನ್ ನಲ್ಲಿ ಇಸ್ತ್ರಿಯಿಲ್ಲದ ಬಟ್ಟೆ, ಹಿತವಾದ ಮಂಚ ಮತ್ತು ವೀಕ್ಷಿಸಲು ಅತ್ಯುತ್ತಮ ವೆಬ್ ಸೀರೀಸ್ ಗಳು ಎಂದು ಲಾಪ್ ಟಾಪ್ ಹಿಡಿದು ರಿಲ್ಯಾಕ್ಸ್ ಆಗಿ ಕುಳಿತಿರುವ ಫೋಟೋಗಳನ್ನು ಕೊಹ್ಲಿ ಪ್ರಕಟಿಸಿದ್ದಾರೆ. ಇದರ ಜತೆಗೆ ಕ್ವಾರಂಟೈನ್ ಅವಧಿಯಲ್ಲೇ ಕೊಹ್ಲಿ ಮತ್ತು ಟೀಂ ನೆಟ್ ಅಭ್ಯಾಸವನ್ನೂ ನಡೆಸುತ್ತಿದೆ.