Publish Date: Tue, 15 Dec 2020 (09:17 IST)
Updated Date: Tue, 15 Dec 2020 (09:19 IST)
ಸಿಡ್ನಿ: ಟೀಂ ಇಂಡಿಯಾ ಟೆಸ್ಟ್ ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಇದೀಗ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ಅವರು ಟೆಸ್ಟ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಕಾತುರದಲ್ಲಿದ್ದಾರೆ.
ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಈ ಟೆಸ್ಟ್ ಸರಣಿ ರಾಹುಲ್ ಪಾಲಿಗೆ ಹೊಸ ಆರಂಭ. ವಿರಾಟ್ ಕೊಹ್ಲಿ, ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್ ಮೇಲೆ ಹೆಚ್ಚಿನ ಹೊಣೆಗಾರಿಕೆಯಿದೆ. ಅವರಿಗೆ ಆರಂಭಿಕ ಸ್ಥಾನ ಸಿಗುತ್ತೋ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಅವಕಾಶ ಸಿಗುತ್ತೋ, ಒಟ್ಟಾರೆ ಅದನ್ನು ಅವರು ಸರಿಯಾದ ರೀತಿಯಲ್ಲಿ ಬಳಸಿಕೊಂಡು ದೊಡ್ಡ ಇನಿಂಗ್ಸ್ ಆಡಿದರೆ ಟೆಸ್ಟ್ ನಲ್ಲೂ ಅವರು ಖಾಯಂ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಹೀಗಾಗಿ ರಾಹುಲ್ ಪಾಲಿಗೆ ಇದು ಮಹತ್ವದ ಸರಣಿ.