Publish Date: Sun, 13 Dec 2020 (10:19 IST)
Updated Date: Sun, 13 Dec 2020 (10:20 IST)
ಮುಂಬೈ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಬಾರಿ ದ್ವಿಶತಕ ಸಿಡಿಸಿದ ದಾಖಲೆ ಮಾಡಿದವರು. ಅವರು ತಮ್ಮ ಏಕದಿನ ವೃತ್ತಿ ಜೀವನದಲ್ಲಿ ಒಟ್ಟು ಮೂರು ಬಾರಿ ದ್ವಿಶತಕ ಗಳಿಸಿದ್ದಾರೆ.
ಶ್ರೀಲಂಕಾ ವಿರುದ್ಧ 2017 ರಲ್ಲಿ ಇದೇ ದಿನ ರೋಹಿತ್ ತಮ್ಮ ಏಕದಿನ ವೃತ್ತಿ ಜೀವನದ ಮೂರನೇ ದ್ವಿಶತಕ ಸಿಡಿಸಿದ್ದರು. ಆ ಪಂದ್ಯದಲ್ಲಿ ಅವರು 208 ರನ್ ಗಳಿಸಿ ಅಜೇಯರಾಗಿದ್ದರು.12 ಸಿಕ್ಸರ್, 13 ಬೌಂಡರಿಗಳೊಂದಿಗೆ ರೋಹಿತ್ ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕ ಸಿಡಿಸಿದ ಏಕೈಕ ಆಟಗಾರ ಎಂಬ ದಾಖಲೆ ಮಾಡಿದ್ದು ಇದೇ ದಿನ.