Publish Date: Mon, 14 Dec 2020 (09:32 IST)
Updated Date: Mon, 14 Dec 2020 (09:34 IST)
ಮುಂಬೈ: ಜಾಗತಿಕ ಮಟ್ಟದಲ್ಲಿ ಚೆಸ್ ನಲ್ಲಿ ಭಾರತಕ್ಕೆ ಖ್ಯಾತಿ ತಂದುಕೊಟ್ಟ ಚೆಸ್ ಪಟು ವಿಶ್ವನಾಥನ್ ಆನಂದ್ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ಮೂಡಿಬರಲಿದೆ.
ಆನಂದ್ ಎಲ್ ರೈ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಇದರ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ವಿಶ್ವನಾಥನ್ ಆನಂದ್ ಪಾತ್ರವನ್ನು ಯಾರು ಮಾಡಬಹುದು ಎಂಬ ಕುತೂಹಲವಿದೆ. ನಿನ್ನೆ ಚೆಸ್ ದಿಗ್ಗಜನ ಬರ್ತ್ ಡೇ ಇದ್ದು, ಈ ದಿನ ಇಂತಹದ್ದೊಂದು ಖುಷಿಯ ವಿಚಾರ ಕೇಳಿಬಂದಿದೆ.