Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಗರಿಷ್ಠ ರನ್ ಸರದಾರರು ಯಾರು ಗೊತ್ತಾ?

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಗರಿಷ್ಠ ರನ್ ಸರದಾರರು ಯಾರು ಗೊತ್ತಾ?
ಸಿಡ್ನಿ , ಸೋಮವಾರ, 14 ಡಿಸೆಂಬರ್ 2020 (08:49 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಎಂದರೆ ಅದರದ್ದೇ ಆದ ಗತ ವೈಭವದ ಇತಿಹಾಸವಿದೆ. ಈ ಎರಡೂ ತಂಡಗಳು ಹಿಂದೆ ಮುಖಾಮುಖಿಯಾದಾಗಲೆಲ್ಲಾ ಹಲವು ಸ್ಮರಣೀಯ ಇನಿಂಗ್ಸ್ ಗಳು ದಾಖಲಾಗಿವೆ. ಎರಡೂ ತಂಡಗಳ ಪೈಕಿ ಗರಿಷ್ಠ ರನ್ ಸರದಾರರು ಯಾರು ಎಂದು ನೋಡೋಣ.


ಭಾರತ ಮತ್ತು ಆಸೀಸ್ ಮುಖಾಮುಖಿಯಾದಾಗಲೆಲ್ಲಾ ಎದುರಾಳಿಗಳಿಗೆ ಟಾರ್ಗೆಟ್ ಆಗುತ್ತಿದ್ದವರು ಸಚಿನ್. ವಿಶೇಷವೆಂದರೆ ಈ ಎರಡೂ ತಂಡಗಳ ಸರಣಿಯಲ್ಲಿ ಗರಿಷ್ಠ ರನ್ ಸರದಾರ ಎಂಬ ದಾಖಲೆಯೂ ಅವರದ್ದೇ. ಸಚಿನ್ ಒಟ್ಟು 3630 ರನ್ ಗಳಿಸಿದ್ದಾರೆ. ಎರಡನೇ ಸ್ಥಾನ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ರದ್ದು. ಪಾಂಟಿಂಗ್ ಒಟ್ಟು 2555 ರನ್ ಗಳಿಸಿದ್ದಾರೆ. ಮೂರು ಮತ್ತು ನಾಲ್ಕನೇ ಸ್ಥಾನ ಆಸ್ಟ್ರೇಲಿಯನ್ನರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ರದ್ದು. ಲಕ್ಷ್ಮಣ್ 2434 ರನ್ ಗಳಿಸಿದ್ದರೆ, ದ್ರಾವಿಡ್ 2143 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತ-ಆಸೀಸ್ ಟೆಸ್ಟ್ ಕಾದಾಟದ ರೋಚಕತೆಗೆ ಇದೀಗ ಮತ್ತೆ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ ಡ್ರಾ