Webdunia - Bharat's app for daily news and videos

Install App

ಅಜಯ್‌ ಜಡೇಜಾಗೆ ಖುಲಾಯಿಸಿದ ಅದೃಷ್ಟ: ಜಾಮ್‌ನಗರ ಸಿಂಹಾಸನದ ಉತ್ತರಾಧಿಕಾರಿಯಾಗಿ ಆಯ್ಕೆ

Sampriya
ಭಾನುವಾರ, 13 ಅಕ್ಟೋಬರ್ 2024 (13:50 IST)
Photo Courtesy X
ಅಹಮದಾಬಾದ್‌: ಇಲ್ಲಿನ ಜಾಮ್‌ನಗರ ಎಂದು ಕರೆಯಲ್ಪಡುವ ನವನಗರದ ಸಿಂಹಾಸನದ ಉತ್ತರಾಧಿಕಾರಿಯಾಗಿ ‌ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಅವರನ್ನು ಆಯ್ಕೆ ಮಾಡಲಾಗಿದೆ.

ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ನವನಗರದ ಮುಂದಿನ ಜಾಮ್ ಸಾಹೇಬ್ ಎಂದು ಘೋಷಿಸಲಾಗಿದ್ದು, ನವನಗರವನ್ನು ಈಗ ಜಾಮ್‌ನಗರ ಎಂದು ಕರೆಯಲಾಗುತ್ತದೆ.

ಇದು ಗುಜರಾತ್‌ನ ಗಲ್ಫ್ ಆಫ್ ಕಚ್‌ನ ದಕ್ಷಿಣ ಕರಾವಳಿಯಲ್ಲಿರುವ ಐತಿಹಾಸಿಕ ಹಲಾರ್ ಪ್ರದೇಶದಲ್ಲಿ ನೆಲೆಗೊಂಡಿರುವ ಭಾರತೀಯ ರಾಜಪ್ರಭುತ್ವದ ರಾಜ್ಯವಾಗಿದೆ. ನವನಗರದ ಮಹಾರಾಜ ಜಾಮ್ ಸಾಹೇಬ್ ಈ ವಿಚಾರವನ್ನು ತಮ್ಮ ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ.

ಅಂದಹಾಗೆ ಅಜಯ್ ಜಡೇಜಾ ಸೇರಿರುವ ಜಾಮ್‌ನಗರ ರಾಜಮನೆತನವು ಕ್ರಿಕೆಟ್‌ನಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪ್ರತಿಷ್ಠಿತ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಗೆ ಜಡೇಜಾ ಅವರ ಸಂಬಂಧಿಕರಾದ ಕೆ. ಎಸ್. ರಂಜಿತ್ ಸಿನ್ಹಜಿ ಮತ್ತು ಕೆ ಎಸ್ ದುಲೀಪ್ ಸಿನ್ಹಜಿ ಅವರ ಹೆಸರನ್ನು ಇಡಲಾಗಿದೆ.

ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿರುವ 53 ವರ್ಷದ ಜಡೇಜಾ ಅವರು ಜಾಮ್‌ನಗರ ರಾಜಮನೆತನದ ವಂಶಸ್ಥರು. ಅವರು 1971 ರಲ್ಲಿ ನವನಗರ ಎಂದು ಕರೆಯಲ್ಪಡುವ ಜಾಮ್‌ನಗರದಲ್ಲಿ ದೌಲತ್‌ಸಿನ್ಹಜಿ ಜಡೇಜಾ ಅವರ ಪುತ್ರನಾಗಿ ಜನಿಸಿದರು. ಅವರ ತಂದೆ ಶತ್ರಿಸಲ್ಯಸಿಂಹಜಿಯವರ ಸೋದರ ಸಂಬಂಧಿಯಾಗಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 video: ಜುಟ್ಟು ಹಿಡಿದು ಎಳೀತೀನಿ ನಿಂದು.. ದಿಗ್ವೇಶ್ ಮೇಲೆ ಅಭಿಷೇಕ್ ಶರ್ಮಾ ರೋಷ

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಮುಂದಿನ ಸುದ್ದಿ
Show comments