ಕಾನ್ಪುರದಲ್ಲಿ ನಡೆದ ಕ್ರಿಕೆಟ್ ಚಮತ್ಕಾರದಲ್ಲಿ, ಭಾರತವು ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ಗಳ ಜಯದೊಂದಿಗೆ ಕಮಾಂಡಿಂಗ್ ಸರಣಿಯನ್ನು ಗೆದ್ದುಕೊಂಡಿತು, ಆದರೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಭಾವನಾತ್ಮಕ ಕ್ಷಣವು ವಿಶ್ವದಾದ್ಯಂತ ಹೃದಯಗಳನ್ನು ಗೆದ್ದಿತು.
ಇಂದು ಬಾಂಗ್ಲಾದೇಶ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಅಂತರದ ಜಯ ಸಾಧಿಸಿತು. ಮತ್ತೊಂದೆಡೆ ಕೊಹ್ಲಿ ಹಾಗೂ ಗಂಭೀರ್ ಅವರ ನಡವಳಿಕೆ ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿತು.
ಐಪಿಎಲ್ನಿಂದ ಶುರುವಾದ ಇವರಿಬ್ಬರ ಮುಸುಕಿನ ಗುದ್ದಾಟ, ಆಗಾಗ ಮೈದಾನದಲ್ಲೂ ಸದ್ದು ಮಾಡುತ್ತಿತ್ತು. ಇದರಿಂದ ಇಬ್ಬರ ಅಭಿಮಾನಿಗಳ ನಡುವೆಯೂ ಬಿರುಕು ಮೂಡಿತ್ತು.
ಭಾರತ ಕ್ರಿಕೆಟ್ ತಂಡದ ನಾಯಕ ಹುದ್ದೆಗೆ ಗಂಭೀರ್ ಹೆಸರು ಮುಂಚೂಣಿಗೆ ಬರುತ್ತಿದ್ದ ಹಾಗೇ ವಿರಾಟ್ ಕತೆ ಮುಗಿಯುತು ಎಂದು ಬಹುತೇಕರು ಅಂದುಕೊಂಡಿದ್ದರು. ಆದರೆ ಭಾರತ ತಂಡದ ಮುಖ್ಯಕೋಚ್ ಆದ ನಂತರ ಆಗಿದ್ದೆ ಬೇರೆ. ಈ ಹಿಂದೆ ಅಭ್ಯಾಸದ ವೇಳೆ ಸಾಕಷ್ಟು ಬಾರಿ ಅವರಿಬ್ಬರು ಹರಟೆ ಹೊಡೆಯುವ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿತ್ತು.
ಬಾಂಗ್ಲಾ ವಿರುದ್ಧ ಭಾರತ ತಂಡವು ಟೆಸ್ಟ್ ಸರಣಿ ಗೆಲ್ಲುತ್ತಿದ್ದ ಹಾಗೇ ವಿರಾಟ್ ಅವರನ್ನು ಗಂಭೀರ್ ಅಪ್ಪಿ, ಬೆನ್ನು ತಟ್ಟಿದರು. ವಿರಾಟ್ ಅವರು ಬಾಂಗ್ಲಾ ವಿರುದ್ದ ಬ್ಯಾಟಿಂಗ್ನಲ್ಲಿ ಗಮನ ಸೆಳೆದಿದ್ದರು.