Webdunia - Bharat's app for daily news and videos

Install App

ಸಂಜು, ಸೂರ್ಯ ಅಬ್ಬರಕ್ಕೆ ಬಾಂಗ್ಲಾ ತತ್ತರ: ಸಾಲು ಸಾಲು ದಾಖಲೆ ಬರೆದ ಭಾರತ

Sampriya
ಭಾನುವಾರ, 13 ಅಕ್ಟೋಬರ್ 2024 (10:22 IST)
Photo Courtesy X
ಹೈದರಾಬಾದ್: ಸಂಜು ಸ್ಯಾಮ್ಸನ್‌ ಅವರ ಶತಕ, ನಾಯಕ ಸೂರ್ಯಕುಮಾರ್‌ ಯಾದವ್‌ ಅರ್ಧಶತಕದ ಬಲದಿಂದ ಭಾರತ ತಂಡವು ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು 133 ರನ್‌ಗಳಿಂದ ಗೆಲುವು ಸಾಧಿಸಿತು.

ಭಾರತ ಬ್ಯಾಟರ್‌ಗಳ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ನೆರವಿನಿಂದ ಭಾರತ ತಂಡ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತ ದಾಖಲಿಸಿತು. ಭಾರತ 20 ಓವರುಗಳಲ್ಲಿ 6 ವಿಕೆಟ್‌ಗೆ 297 ರನ್‌ಗಳ ಭಾರಿ ಮೊತ್ತ ಗಳಿಸಿತು.

ಭಾರತದ ಆಕ್ರಮಣದ ಆಟದೆದುರು ಕಂಗಾಲಾದ ಬಾಂಗ್ಲಾದೇಶ 20 ಓವರುಗಳಲ್ಲಿ 7 ವಿಕೆಟ್‌ಗೆ 164 ರನ್ ಗಳಿಸಿ ಸವಾಲು ಮುಗಿಸಿತು. ಈ ಮೂಲಕ ಭಾರತ ತಂಡವು ಬಾಂಗ್ಲಾ ವಿರುದ್ಧದ ಸರಣಿಯನ್ನು 3-0ಯಿಂದ ಗೆದ್ದುಕೊಂಡಿತು.

ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ಅತ್ಯಧಿಕ ಮೊತ್ತ (297/6). ನೇಪಾಳ, ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ 3 ವಿಕೆಟ್‌ಗೆ 314 ರನ್ ಗಳಿಸಿದ್ದು ದಾಖಲೆಯಾಗಿದೆ. ಭಾರತದ ಇನಿಂಗ್ಸ್‌ನಲ್ಲಿ ದಾಖಲೆಯ 22 ಸಿಕ್ಸರ್‌, 25 ಬೌಂಡರಿಗಳು ಹರಿದು ಬಂದವು.  7.2 ಓವರ್‌ ಆಗಿದ್ದಾಗ 100, 14 ಓವರ್‌ಗಳಲ್ಲಿ 200 ರನ್‌ ಗಡಿ ದಾಟಿತು.

ಭಾರತದ ಈ ಹಿಂದಿನ ಗರಿಷ್ಠ ಮೊತ್ತ 5 ವಿಕೆಟ್‌ಗೆ 260 ರನ್‌ಗಳಾಗಿತ್ತು. ಇದನ್ನು ಶ್ರೀಲಂಕಾ ವಿರುದ್ಧ 2017ರಲ್ಲಿ ಇಂದೋರ್‌ನಲ್ಲಿ ಗಳಿಸಿತ್ತು. ಅದನ್ನು ಮುರಿಯಿತು.

ಸಂಜು ಸ್ಯಾಮ್ಸನ್‌ 47 ಎಸೆತಗಳಲ್ಲಿ 111 ರನ್‌ ಸಿಡಿಸಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ. ವೇಗದ ಶತಕದ ದಾಖಲೆ ರೋಹಿತ್‌ ಶರ್ಮಾ (35 ಎಸೆತ) ಹೆಸರಿನಲ್ಲಿದೆ. ಸೂರ್ಯಕುಮಾರ್ ಕೇವಲ 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಅವರು 75 ರನ್‌ ಸಿಡಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments