ಮುಲ್ತಾನ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅವಮಾನಕರ ಸೋಲಾಗಿದೆ.
ಈ ಸೋಲಿನೊಂದಿಗೆ ಪಾಕಿಸ್ತಾನ ಕ್ರಿಕೆಟ್ ಹೆಸರಿಗೆ ನಾಚಿಕೆಗೇಡಿನ ದಾಖಲೆಯೊಂದು ಸೇರ್ಪಡೆಯಾಗಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡ ಅನುಭವಿಸದ ಸೋಲನ್ನು ಪಾಕ್ ತಂಡ ಎದುರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದೆ.
ಟಾಸ್ ಗೆದ್ದು ಮೊದಲ ಇನಿಂಗ್ಸ್ ಆರಂಭಿಸಿದ್ದ ಪಾಕಿಸ್ತಾನ ತಂಡ 556 ರನ್ ಕಲೆಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ಕೂಡ 823 ರನ್ಗಳ ಬಿಗ್ ಇನ್ನಿಂಗ್ಸ್ ಆಡಿತ್ತು. ಹೀಗಾಗಿ ಪಂದ್ಯದ ಮೊದಲ ಮೂರೂವರೆ ದಿನಗಳ ಕಾಲ ಪಂದ್ಯ ಡ್ರಾದತ್ತ ಸಾಗುವಂತೆ ತೋರುತ್ತಿತ್ತು. ಆದರೆ ನಾಲ್ಕನೇ ದಿನದ ಕೊನೆಯ ಸೆಷನ್‌ನಿಂದ ಪಂದ್ಯ ಹೊಸ ತಿರುವು ಪಡೆದುಕೊಂಡಿತು. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಇನ್ನಿಂಗ್ಸ್ ಸೋಲು ಎದುರಿಸಿರುವುದು ಇದೇ ಮೊದಲು.
ಈ ಸೋಲು ಅನುಭವಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪಾಕಿಸ್ತಾನದ ಆಟಗಾರರಾದ ಬಾಬರ್ ಆಜಂ ಪಂಚರ್ ಶಾಪ್‌ವೊಂದನ್ನು ನಡೆಸುವ ಹಾಗೇ ಹಾಗೂ ಡಾಂಬರು ರೋಡ್‌ನಲ್ಲಿ ಕ್ರಿಕೆಟ್ ಆಡುವಾಗ ಹಾಗೇ ಟ್ರೋಲ್ ಮಾಡಿದ್ದಾರೆ.