ಚೆನ್ನೈ: ಶುಕ್ರವಾರ ಕಾನ್ಪುರದ ಗ್ರೀನ್ ಪಾಕ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯಾಟದ ವೇಳೆ ಭಾರತ ಶತ್ರು ಎಂದು ಘೋಷಣೆ ಕೂಗುತ್ತಿದ್ದ ಬಾಂಗ್ಲಾ ಅಭಿಮಾನಿ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ.
ಬಾಂಗ್ಲಾದೇಶ ತಂಡದ ಸೂಪರ್ ಫ್ಯಾನ್ ಟೈಗರ್ ರಾಬಿ ಅವರನ್ನು ಕೆಲವು ಟೀಂ ಇಂಡಿಯಾ ಅಭಿಮಾನಿಗಳು ಥಳಿಸಿದ್ದಾರೆ ಎನ್ನಲಾಗಿದೆ. ಪಂದ್ಯಾಟದ ವೇಳೆ ಭಾರತ ಕ್ರಿಕೆಟರ್ ಮೊಹಮ್ಮದ್ ಸಿರಾಜ್ರನ್ನು ನಿಂದನೆ ಮಾಡುತ್ತಿದ್ದ. ಅದಲ್ಲದೆ ಭಾರತ ಶತ್ರು ಎಂದು ಕೂಗಾಡಿದ್ದಾನೆ. ಇದರಿಂದ ಕೋಪಗೊಂಡ ಟೀಂ ಇಂಡಿಯಾ ಫ್ಯಾನ್ಸ್ ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸರು ಮಧ್ಯಪ್ರವೇಶಿಸಿ ರಾಬಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ 1ನೇ ದಿನದಂದು ಈ ಘಟನೆ ನಡೆದಿದೆ. ಸ್ಥಳೀಯ ಅಭಿಮಾನಿಗಳು ಮತ್ತು ರಾಬಿ ನಡುವಿನ ಜಗಳಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ಸುದ್ದಿ ಸಂಸ್ಥೆ ಪಿಟಿಐ ಹೀಗೆ ಬರೆದಿದೆ.
"ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶ ಕ್ರಿಕೆಟ್ ತಂಡದ 'ಸೂಪರ್ ಫ್ಯಾನ್' ಟೈಗರ್ ರಾಬಿ ಅವರನ್ನು ಕೆಲವರು ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರಿಂದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.