ಮುಂಬೈ: ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದೇ ಪರಿಗಣಿತವಾಗಿರುವ ಹಾರ್ದಿಕ್ ಪಾಂಡ್ಯ ಹಿರಿಯರನ್ನು ಕಡೆಗಣಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ತಂಡದ ಹಿರಿಯ ಆಟಗಾರರು ನೀಡುವ ಸಲಹೆಯನ್ನು ಹಾರ್ದಿಕ್ ಸ್ವೀಕರಿಸುವುದಿಲ್ಲ ಎಂದು ಕೆಲವರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮೊದಲ ಏಕದಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಫೀಲ್ಡಿಂಗ್ ಬಗ್ಗೆ ನೀಡಿದ ಸಲಹೆಯನ್ನು ಕ್ಯಾರೇ ಎನ್ನದೇ ಹಾರ್ದಿಕ್ ಬೌಲರ್ ಗೆ ಸೂಚನೆ ನೀಡಿ ತೆರಳಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಕೆಲವು ದಿನಗಳ ಮೊದಲು ರೋಹಿತ್ ಶರ್ಮಾರನ್ನು ಅವಾಚ್ಯವಾಗಿ ಮೈದಾನದಲ್ಲೇ ನಿಂದಿಸಿದ್ದಾರೆಂಬ ವಿಡಿಯೋವೊಂದು ಹರಿದಾಡಿತ್ತು. ಇದರ ಸತ್ಯಾಸತ್ಯತೆ ತಿಳಿದುಬಂದಿರಲಿಲ್ಲ. ಆದರೆ ಹಾರ್ದಿಕ್ ಗೆ ತಾನು ಭವಿಷ್ಯದ ನಾಯಕ ಎಂಬ ಹಣೆಪಟ್ಟಿ ಸಿಗುತ್ತಿದ್ದಂತೇ ಅವರ ವರ್ತನೆಯೇ ಬದಲಾಗಿದೆ ಎಂಬ ಆರೋಪ ಕೇಳಿಬಂದಿದೆ.