Publish Date: Mon, 20 Mar 2023 (08:40 IST)
Updated Date: Mon, 20 Mar 2023 (09:02 IST)
ಮುಂಬೈ: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಯುಪಿ ವಾರಿಯರ್ಸ್ ಗೆ ಪ್ಲೇ ಆಫ್ ಹಂತಕ್ಕೇರಲು ಕೊನೆಯ ಅವಕಾಶ ಸಿಕ್ಕಿದೆ.
ಇಂದು ಗುಜರಾತ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಯುಪಿ ಗೆದ್ದುಕೊಂಡರೆ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸಲಿದೆ. ಒಂದು ವೇಳೆ ಡೆಲ್ಲಿ ಇಂದು ನಂತರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೆ ಯುಪಿಗೆ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.
ಹೀಗಾಗಿ ಇಂದು ಯುಪಿ ವಾರಿಯರ್ಸ್ ಮೊದಲ ಪಂದ್ಯವನ್ನು ಗುಜರಾತ್ ವಿರುದ್ಧ ಗೆದ್ದರೆ ಎರಡನೇ ಪಂದ್ಯದಲ್ಲಿ ಡೆಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಹೀಗಾಗಿ ಇಂದಿನ ಪಂದ್ಯ ರೋಚಕವಾಗಲಿದೆ. ಈ ಪಂದ್ಯಗಳು ಮಧ್ಯಾಹ್ನ 3.30 ಕ್ಕೆ ಮತ್ತು ಸಂಜೆ 7.30 ಕ್ಕೆ ನಡೆಯಲಿದೆ.