Publish Date: Sun, 19 Mar 2023 (17:30 IST)
Updated Date: Sun, 19 Mar 2023 (17:32 IST)
ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಆಸೀಸ್ 10 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಭಾರತ ಮೊದಲು ಬ್ಯಾಟಿಂಗ್ ಮಾಡಿ ಕೇವಲ 117 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಆಸೀಸ್ ಬೌಲರ್ ಗಳು ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿ ಕೇವಲ 11 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 121 ರನ್ಗಳಿಸಿ ಗುರಿ ತಲುಪಿದರು.
ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 51 ರನ್, ಮಿಚೆಲ್ ಮಾರ್ಷ್ 36 ಎಸೆತಗಳಿಂದ 66 ರನ್ ಚಚ್ಚಿದರು. ಇದರೊಂದಿಗೆ ಏಕದಿನ ಸರಣಿ 1-1 ರಿಂದ ಸಮಬಲಗೊಂಡಿತು. ಮುಂದಿನ ಪಂದ್ಯ ಬುಧವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಗೆದ್ದವರು ಸರಣಿ ಕೈವಶ ಮಾಡಿಕೊಳ್ಳಲಿದ್ದಾರೆ.