Publish Date: Thu, 18 Mar 2021 (08:55 IST)
Updated Date: Thu, 18 Mar 2021 (08:57 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು, ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾವಿದೆ.
ಈ ಪಂದ್ಯವನ್ನು ಸೋತರೆ ಟೀಂ ಇಂಡಿಯಾ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಗೆಲುವಿನ ಒತ್ತಡದಲ್ಲಿ ಟೀಂ ಇಂಡಿಯಾ ಇದೆ. ಈ ಸರಣಿಯುದ್ದಕ್ಕೂ ಟಾಸ್ ಪ್ರಮುಖ ಪಾತ್ರ ವಹಿಸುತ್ತಿರುವುದು ಮತ್ತು ಈ ವಿಚಾರದಲ್ಲಿ ವಿರಾಟ್ ಕೊಹ್ಲಿ ದುರಾದೃಷ್ಟ ಮುಂದುವರಿದಿರುವುದು ಟೀಂ ಇಂಡಿಯಾದ ಮೊದಲ ತಲೆನೋವಾಗಿದೆ.
ಭಾರತಕಕ್ಕಿರುವ ದೊಡ್ಡ ತಲೆನೋವು ಬ್ಯಾಟಿಂಗ್. ಅದರಲ್ಲೂ ಈ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಆರಂಭಿಕರ ವಿಚಾರದಲ್ಲಿ ಪ್ರಯೋಗ ನಡೆಯುತ್ತಲೇ ಇದೆ. ಆದರೆ ಎಲ್ಲರೂ ವಿಫಲರಾಗಿ ಭಾರತವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ. ಕೊಹ್ಲಿ ಫಾರ್ಮ್ ಗೆ ಬಂದಿರುವುದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಆದರೆ ಉಳಿದವರಿಂದ ಸ್ಥಿರ ಪ್ರದರ್ಶನ ಬರಬೇಕಿದೆ. ಇಲ್ಲದೇ ಹೋದರೆ ಭಾರತಕ್ಕೆ ಇಂದೂ ಗೆಲ್ಲುವುದು ಅಸಾಧ್ಯವಾಗಿದೆ.