ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುದ್ದಿ ಪ್ರಕಟಿಸುತ್ತಿದ್ದಂತೇ ಇತ್ತ ಹಿಟ್ ಮ್ಯಾನ್ ರೋಹಿತ್ ಶರ್ಮಾ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ.
ರೋಹಿತ್ ಶರ್ಮಾಗೂ ಬುಮ್ರಾ ಮದುವೆಗೂ ಏನು ಸಂಬಂಧ ಅಂತೀರಾ? ರೋಹಿತ್ ಗೆ ಇಂಗ್ಲೆಂಡ್ ವಿರುದ್ಧದ ಕಳೆದ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಹೀಗಾಗಿ ನೆಟ್ಟಿಗರು ಹೇಗಿದ್ದರೂ ರೋಹಿತ್ ಡಗ್ ಔಟ್ ನಲ್ಲಿ ಸುಮ್ಮನೇ ಕೂತಿರುತ್ತಾರೆ. ಅವರನ್ನು ಮದುವೆಗಾದರೂ ಕರೆಯಬಹುದಿತ್ತು ಎಂದು ಟ್ರೋಲ್ ಮಾಡಿದ್ದಾರೆ.
ಇನ್ನು, ಎರಡನೇ ಟಿ20 ಪಂದ್ಯದ ವೇಳೆ ಡಗ್ ಔಟ್ ನಲ್ಲಿ ರೋಹಿತ್ ಶರ್ಮಾ ಕದ್ದು ಮುಚ್ಚಿ ತಿಂಡಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದಕ್ಕೂ ಟ್ರೋಲ್ ಆಗಿದ್ದಾರೆ. ವಡಾ ಪಾವ್ ತಿನ್ನುವುದಕ್ಕೆಂದೇ ರೋಹಿತ್ ಪಂದ್ಯ ಮಿಸ್ ಮಾಡಿಕೊಂಡಿದ್ದರು ಎಂದು ಅಭಿಮಾನಿಗಳು ತಮಾಷೆ ಮಾಡಿದ್ದಾರೆ.