Publish Date: Tuesday, 16 March 2021 (09:46 IST)
Updated Date: Tuesday, 16 March 2021 (09:48 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ತೃತೀಯ ಟಿ20 ಪಂದ್ಯ ನಡೆಯಲಿದ್ದು, ಭಾರತದ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಮೊದಲ ಟಿ20 ಪಂದ್ಯದ ವೇಳೆ ನಾಯಕ ಕೊಹ್ಲಿ, ಎರಡು ಪಂದ್ಯಗಳಲ್ಲಿ ರೋಹಿತ್ ಆಡಲ್ಲ ಎಂದಿದ್ದರು. ಅದರಂತೆ ಎರಡು ಪಂದ್ಯಗಳ ಗಡುವು ಮುಗಿದಿದ್ದು, ಇಂದಿನ ಪಂದ್ಯಕ್ಕೆ ಹಿಟ್ ಮ್ಯಾನ್ ಬ್ಯಾಟಿಂಗ್ ವೀಕ್ಷಿಸುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಕಳೆದ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರೂ ರನ್ ಗಳಿಸಿರಲಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ರೋಹಿತ್ ಶರ್ಮಾ ಆರಂಭಿಕರಾಗಬಹುದು. ಇಶಾನ್ ಕಿಶನ್ ಜೊತೆಗೆ ರೋಹಿತ್ ಆರಂಭ ಮಾಡಿದರೆ ಮತ್ತೆ ಮುಂಬೈ ಇಂಡಿಯನ್ಸ್ ಜೋಡಿಯ ಬ್ಯಾಟಿಂಗ್ ವೈಭವ ನೋಡುವ ಭಾಗ್ಯ ವೀಕ್ಷಕರಿಗೆ ಸಿಗಲಿದೆ.