Publish Date: Sat, 14 Nov 2020 (10:54 IST)
Updated Date: Sat, 14 Nov 2020 (10:56 IST)
ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಹಿನ್ನಲೆಯಲ್ಲಿ ಮುಂದಿನ ಐಪಿಎಲ್ ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಉಳಿಯುವುದು ಅನುಮಾನ ಎಂದು ಟೀಂ ಇಂಡಿಯಾ ಮಾಜಿ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.
2011 ರಲ್ಲೂ ತಮ್ಮ ನಾಯಕತ್ವದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದಾಗ ಧೋನಿ ನಾಯಕತ್ವ ತ್ಯಜಿಸಲು ಮುಂದಾಗಿದ್ದರು. ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕೇವಲ ಆಟಗಾರನಾಗಿ ಮುಂದುವರಿದರು. ಈಗ ಚೆನ್ನೈ ತಂಡದಲ್ಲೂ ಮುಂದಿನ ಆವೃತ್ತಿಯಲ್ಲಿ ನಾಯಕತ್ವ ಬಿಟ್ಟು ಕೇವಲ ಆಟಗಾರನಾಗಿ ಮುಂದುವರಿದರೂ ಅಚ್ಚರಿಯಿಲ್ಲ ಎಂದು ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.