Publish Date: Sun, 15 Nov 2020 (09:22 IST)
Updated Date: Sun, 15 Nov 2020 (09:23 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪಾಲಿಗೆ ಇಂದು ವಿಶೇಷ ದಿನ. ಯಾಕೆಂದರೆ ಇಂದು ಅವರು ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ಕಾಲಿಟ್ಟ ದಿನ.
ಇದೇ ದಿನ ಅಂದರೆ ನವಂಬರ್ 15 ರಂದು 1989 ರಲ್ಲಿ ಸಚಿನ್ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಈ ಮೂಲಕ ಅವರ ವೃತ್ತಿ ಜೀವನ ಆರಂಭವಾಗಿತ್ತು. ಇದು ನಡೆದು ಇಂದಿಗೆ ಸರಿಯಾಗಿ 31 ವರ್ಷಗಳೇ ಕಳೆದಿವೆ. ಈ ದಿನ ಅವರು 15 ರನ್ ಗಳಿಸಿದ್ದರು. ಆದರೆ ಬಳಿಕ ಕ್ರಿಕೆಟ್ ಜಗತ್ತಿನ ಅಸಾಮಾನ್ಯ ದಾಖಲೆಗಳನ್ನೇ ತಮ್ಮ ಹೆಸರಿಗೆ ಬರೆಯಿಸಿಕೊಂಡು ಕ್ರಿಕೆಟ್ ದೇವರೆನಿಸಿಕೊಂಡಿದ್ದರು.