Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸಿಡ್ನಿ: ಥೈಲ್ಯಾಂಡ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅಂತಿಮ ಸಂಸ್ಕಾರ ತವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿಯೇ ನಡೆಯಲಿದೆ.
ಸದ್ಯಕ್ಕೆ ಶೇನ್ ಮೃತದೇಹ ಥೈಲ್ಯಾಂಡ್ ನಲ್ಲಿದ್ದು, ಕೆಲವು ಔಪಚಾರಿಕ ಪ್ರಕ್ರಿಯೆಗಳ ನಂತರ ಮೃತದೇಹ ತವರು ರಾಷ್ಟ್ರಕ್ಕೆ ಬರಲಿದೆ. ಇದಾದ ಬಳಿಕ ಮೆಲ್ಬೋರ್ನ್ ನಲ್ಲಿ ಅವರ ಅಂತ್ಯ ಕ್ರಿಯೆ ನಡೆಯಲಿದೆ.
ಅವರ ಅಂತಿಮ ಸಂಸ್ಕಾರ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಈಗಾಗಲೇ ಆಸ್ಟ್ರೇಲಿಯಾ ಸರ್ಕಾರ ತಿಳಿಸಿದೆ. ಹೀಗಾಗಿ ಎಲ್ಲಾ ಔಪಚಾರಿಕ ಪ್ರಕ್ರಿಯೆಗಳನ್ನು ಮುಗಿಸಿ ತವರಿಗೆ ಮೃತದೇಹ ಕರೆತಂದು ಅಂತಿಮ ಕ್ರಿಯೆ ನಡೆಸಲು ಇನ್ನಷ್ಟು ದಿನ ಬೇಕಾಗಬಹುದು.