Publish Date: Mon, 07 Mar 2022 (09:30 IST)
Updated Date: Mon, 07 Mar 2022 (09:52 IST)
ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಟೀಂ ಇಂಡಿಯಾ ಭರ್ಜರಿಯಾಗಿ ಗೆಲ್ಲುವ ಸಮಯದಲ್ಲಿ 100 ನೇ ಟೆಸ್ಟ್ ಆಡುತ್ತಿದ್ದ ವಿರಾಟ್ ಕೊಹ್ಲಿ ಮೈದಾನದಲ್ಲೇ ಇರಲಿಲ್ಲ.
ರೋಹಿತ್ ಶರ್ಮಾ ನಾಯಕರಾಗಿ ಮೊದಲ ಪಂದ್ಯದಲ್ಲೇ ಇನಿಂಗ್ಸ್ ಮತ್ತು 222 ರನ್ ಗಳ ಬೃಹತ್ ಅಂತರದಿಂದ ಗೆದ್ದು ದಾಖಲೆ ಬರೆಯುವ ವೇಳೆಗೆ ಕೊಹ್ಲಿ ಪೆವಿಲಿಯನ್ ನಲ್ಲಿದ್ದರು!
ಗೆಲುವಿನ ಹೊಸ್ತಿಲಲ್ಲಿದ್ದಾಗ ಕೊಹ್ಲಿ ಬ್ರೇಕ್ ಪಡೆಯಲು ಕೆಲವು ಕ್ಷಣ ಪೆವಿಲಿಯನ್ ಗೆ ಮರಳಿದ್ದರು. ಅವರ ಬದಲಿಗೆ ಪ್ರಿಯಾಂಕ್ ಪಂಚಾಲ್ ಫೀಲ್ಡಿಂಗ್ ಮಾಡುತ್ತಿದ್ದರು. ಆದರೆ ಅಷ್ಟರಲ್ಲೇ ಲಂಕಾ ಅಂತಿಮ ವಿಕೆಟ್ ಉರುಳಿತ್ತು. ಹೀಗಾಗಿ ಕೊಹ್ಲಿಗೆ ಗೆಲುವಿನ ವೇಳೆ ಮೈದಾನದಲ್ಲೇ ಸಂಭ್ರಮಿಸಲಾಗಲಿಲ್ಲ.