Publish Date: Mon, 07 Mar 2022 (17:40 IST)
Updated Date: Mon, 07 Mar 2022 (17:41 IST)
ಸೂರತ್: ಐಪಿಎಲ್ 2022 ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೂರತ್ ನಲ್ಲಿ ಅಭ್ಯಾಸ ಆರಂಭಿಸಿದೆ. ಧೋನಿ ಆಂಡ್ ಟೀಂ ಮೈದಾನಕ್ಕಿಳಿಯುತ್ತಿದ್ದಂತೇ ಅಭಿಮಾನಿಗಳಿಂದ ಚಪ್ಪಾಳೆಗಳ ಸುರಿಮಳೆಯಾಗಿದೆ.
ಧೋನಿ ಮೈದಾನಕ್ಕೆ ಬಸ್ ನಲ್ಲಿ ಬಂದಿಳಿಯುತ್ತಿದ್ದಂತೇ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ಜೋರಾಗಿ ಕೂಗಿ ಹುರಿದುಂಬಿಸಿದ್ದಾರೆ.
ಮಾರ್ಚ್ ಅಂತ್ಯಕ್ಕೆ ಆರಂಭವಾಗಲಿರುವ ಐಪಿಎಲ್ ಕೂಟಕ್ಕೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಅಭ್ಯಾಸ ಆರಂಭಿಸಿದೆ.