Publish Date: Tue, 08 Mar 2022 (08:50 IST)
Updated Date: Tue, 08 Mar 2022 (09:05 IST)
ಮುಂಬೈ: ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಂಕಪಟ್ಟಿಯಲ್ಲಿ ವ್ಯತ್ಯಾಸವಾಗಿಲ್ಲ.
ಭಾರತ ಈಗಲೂ ವಿಶ್ವ ಚಾಂಪಿಯನ್ ಶಿಪ್ ರ್ಯಾಂಕಿಂಗ್ ನಲ್ಲಿ ಐದನೇ ಸ್ಥಾನದಲ್ಲಿದೆ. ವಿಶೇಷವೆಂದರೆ ಸೋತಿರುವ ಶ್ರೀಲಂಕಾ ಭಾರತಕ್ಕಿಂತ ಮೇಲೆ ಅಂದರೆ ಮೂರನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಐಸಿಸಿ ಇತ್ತೀಚೆಗೆ ಜಾರಿಗೆ ತಂದ ಶೇಕಡಾವಾರು ಅಂಕಪಟ್ಟಿ. ಅದರಂತೆ ಭಾರತ 54.16 ರೇಟಿಂಗ್ ಪಾಯಿಂಟ್ ಪಡೆದು ಐದನೇ ಸ್ಥಾನದಲ್ಲಿದ್ದರೆ 66.66 ರೇಟಿಂಗ್ ಪಾಯಿಂಟ್ ಹೊಂದಿರುವ ಲಂಕಾ ಮೂರನೇ ಸ್ಥಾನಲ್ಲಿದೆ.
ಭಾರತ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮುನ್ನ 8 ಟೆಸ್ಟ್ ಪಂದ್ಯವಾಡಲಿದೆ. ಎರಡನೇ ಬಾರಿಗೆ ಫೈನಲ್ ತಲುಪಬೇಕಾದರೆ ಭಾರತ ಈ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಗೆ ಸಿಲುಕಿದೆ.