Publish Date: Tue, 16 Mar 2021 (09:05 IST)
Updated Date: Tue, 16 Mar 2021 (09:07 IST)
ಮುಂಬೈ: ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ-ನಿರೂಪಕಿ ಸಂಜನಾ ಗಣೇಶನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಇದೀಗ ಬುಮ್ರಾ ಫೋಟೋ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಇಷ್ಟು ದಿನ ಬುಮ್ರಾ ಮದುವೆ ಬಗ್ಗೆ ಗಾಳಿ ಸುದ್ದಿ ಕೇಳಿಬರುತ್ತಿತ್ತು. ಇದೇ ಕಾರಣಕ್ಕೆ ಅವರು ಟೀಂ ಇಂಡಿಯಾದಿಂದ ಬಿಡುವು ಪಡೆದಿದ್ದರೂ ಈ ಬಗ್ಗೆ ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಅವರ ಮದುವೆಗೂ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಇದೀಗ ಖುದ್ದಾಗಿ ಅವರು ತಮ್ಮ ಮದುವೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಸಂಜನಾ ಜೊತೆ ಹೊಸ ಬಾಳಿಗೆ ಕಾಲಿಟ್ಟಿರುವುದಾಗಿ ಹೇಳಿದ್ದಾರೆ. ಇನ್ನು, ಬುಮ್ರಾ ಮದುವೆಗೆ ಸಹ ಕ್ರಿಕೆಟಿಗರು ಶುಭ ಕೋರಿದ್ದಾರೆ. ನಿಮಗಿಬ್ಬರಿಗೂ ಶುಭವಾಗಲಿ. ನಮ್ಮ ಪ್ರೀತಿ ನಿಮ್ಮ ಮೇಲಿದೆ ಎಂದು ರಾಹುಲ್ ಹೇಳಿದರೆ, ಹಾರ್ದಿಕ್ ಆರೋಗ್ಯಕರ, ಸಂತೋಷದಾಯಕ ವೈವಾಹಿಕ ಬದುಕು ನಿಮ್ಮದಾಗಲಿ ಎಂದು ಶುಭ ಕೋರಿದ್ದಾರೆ.