ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಚೊಚ್ಚಲ ಪಂದ್ಯವಾಡಿದ ಇಶಾನ್ ಕಿಶನ್ ಅರ್ಧಶತಕ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಆದರೆ ಈ ಪಂದ್ಯದಲ್ಲಿ ಅವರು ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ನಡುವೆ ಎಷ್ಟು ರನ್ ಆಯ್ತು ಎನ್ನುವುದನ್ನು ಗಮನಿಸಲೂ ಮರೆತಿದ್ದರಂತೆ. ನನಗೆ ಅರ್ಧಶತಕವಾಗಿದ್ದೂ ಗೊತ್ತಾಗಲಿಲ್ಲ. ವಿರಾಟ್ ಕೊಹ್ಲಿ ಹೇಳಿದಾಗಲೇ ಗೊತ್ತಾಗಿದ್ದು ಎಂದು ಪಂದ್ಯದ ಬಳಿಕ ಯಜುವೇಂದ್ರ ಚಾಹಲ್ ಜೊತೆಗಿನ ಚ್ಯಾಟ್ ಶೋ ವೇಳೆ ಇಶಾನ್ ಹೇಳಿದ್ದಾರೆ.
ನಾನು ನರ್ವಸ್ ಆಗಿರಲಿಲ್ಲ. ಆದರೆ ನನಗೆ ಅರ್ಧಶತಕವಾಗಿದ್ದು ಗೊತ್ತಾಗಲಿಲ್ಲ. ಆಗ ವಿರಾಟ್ ಭಾಯ್ ಇದು ಟಾಪ್ ಇನಿಂಗ್ಸ್ ಎಂದು ಬೆನ್ನು ತಟ್ಟಿದರು. ಆಗಲೇ ಗೊತ್ತಾಗಿದ್ದು ನನ್ನ ಅರ್ಧಶತಕ ಪೂರ್ತಿಯಾಗಿದೆ ಎಂದು. ಸಾಮಾನ್ಯವಾಗಿ ಅರ್ಧಶತಕ ಗಳಿಸಿದಾಗ ನಾನು ಬ್ಯಾಟ್ ಎತ್ತಿ ಸಂಭ್ರಮಿಸಲ್ಲ. ಆದರೆ ವಿರಾಟ್ ಭಾಯ್ ನನಗೆ ಬ್ಯಾಟ್ ಎತ್ತು, ಸೆಲೆಬ್ರೇಟ್ ಮಾಡು ಎಂದರು. ಅದಕ್ಕೆ ಮಾಡಿದೆ ಎಂದು ಇಶಾನ್ ಹೇಳಿಕೊಂಡಿದ್ದಾರೆ.