Publish Date: Tue, 07 Jun 2022 (08:30 IST)
Updated Date: Tue, 07 Jun 2022 (08:56 IST)
ಮುಂಬೈ: ಐಪಿಎಲ್ ಮುಗಿಸಿ ಪತ್ನಿ, ಮಗಳ ಸಮೇತರಾಗಿ ಕಿರು ಪ್ರವಾಸ ತೆರಳಿ ಬಂದಿರುವ ರೋಹಿತ್ ಶರ್ಮಾ ಈಗ ಮತ್ತೆ ಕ್ರಿಕೆಟ್ ಫೀಲ್ಡ್ ಗಿಳಿದಿದ್ದಾರೆ.
ದ.ಆಫ್ರಿಕಾ ವಿರುದ್ಧ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ರೋಹಿತ್ ಶರ್ಮಾ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಇದೀಗ ತಾವು ಮತ್ತೆ ಅಭ್ಯಾಸಕ್ಕಿಳಿದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಫಾರ್ಮ್ ಕೊರತೆಯಿಂದ ಟೀಕೆಗೊಳಗಾಗಿದ್ದ ರೋಹಿತ್ ಗೆ ಈಗ ಫಾರ್ಮ್ ಕಂಡುಕೊಳ್ಳುವುದೂ ಅನಿವಾರ್ಯವಾಗಿದೆ. ಹೀಗಾಗಿ ಈಗಿಂದಲೇ ಇಂಗ್ಲೆಂಡ್ ನ ಕಠಿಣ ಸವಾಲಿಗೆ ಉತ್ತರ ಕೊಡಲು ಸಿದ್ಧತೆ ಆರಂಭಿಸಿದ್ದಾರೆ.