ಮುಂಬೈ: ಟೀಂ ಇಂಡಿಯಾ ಬಿಗ್ ಥ್ರೀ ಬ್ಯಾಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಗೆ ಮಾಜಿ ನಾಯಕ ಕಪಿಲ್ ದೇವ್ ತಪರಾಕಿ ನೀಡಿದ್ದಾರೆ.
ಈ ಮೂವರೂ ಬ್ಯಾಟಿಗರು ತಕ್ಕ ಸಮಯದಲ್ಲೇ ರನ್ ಗಳಿಸಲು ವಿಫಲರಾಗುತ್ತಿದ್ದಾರೆ ಎಂದು ಕಪಿಲ್ ದೇವ್ ಕಿಡಿಕಾರಿದ್ದಾರೆ.
ದೊಡ್ಡ ದೊಡ್ಡ ಹೆಸರು ಗಳಿಸಿದರೆ ಸಾಲದು. ಅದಕ್ಕೆ ತಕ್ಕಂತೆ ಆಡಬೇಕು. ಇಂತಹ ಬಿಗ್ ಹಿಟ್ಟರ್ ಗಳು 150-160 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಬಲ್ಲರು. ಆದರೆ ಇತ್ತೀಚೆಗೆ ಇವರೆಲ್ಲಾ ತಂಡಕ್ಕೆ ರನ್ ಬೇಕಾದಾಗಲೇ ಔಟಾಗುತ್ತಾರೆ. ಇದರಿಂದಾಗಿ ತಂಡದ ಮೇಲೆ ಒತ್ತಡವಾಗುತ್ತಿದೆ ಎಂದು ಕಪಿಲ್ ತರಾಟೆಗೆ ತೆಗೆದುಕೊಂಡಿದ್ದಾರೆ.