Publish Date: Mon, 06 Jun 2022 (10:00 IST)
Updated Date: Mon, 06 Jun 2022 (10:00 IST)
ನವದೆಹಲಿ: ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿಳಿದಿ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ.
ಕೆಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ ಯುವ ಆಟಗಾರರ ಪಡೆ ನಿನ್ನೆಯಷ್ಟೇ ದೆಹಲಿಗೆ ಬಂದಿಳಿದಿದೆ. ತಕ್ಷಣವೇ ನೆಟ್ ಅಭ್ಯಾಸ ಆರಂಭಿಸಿದೆ.
ರೋಹಿತ್, ಕೊಹ್ಲಿ, ಬುಮ್ರಾ ಮುಂತಾದ ಅನುಭವಿಗಳ ಗೈರಿನಲ್ಲಿ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿ ಆಡಲಿದೆ. ಈಗಾಗಲೇ ಆಫ್ರಿಕಾ ತಂಡ ದೆಹಲಿಯಲ್ಲಿ ಅಭ್ಯಾಸ ಆರಂಭಿಸಿತ್ತು.