Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ವಿರಾಟ್ ಕೊಹ್ಲಿಯಿಂದ ತೆರವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನಕ್ಕೆ ಹೊಸ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಶನಿವಾರ ಉತ್ತರ ಸಿಗಲಿದೆ.
ಐಪಿಎಲ್ 2022 ಆರಂಭಕ್ಕೆ ಇನ್ನು ಕೆಲವೇ ದಿನ ಬಾಕಿಯಿದ್ದು ಆರ್ ಸಿಬಿ ಮಾತ್ರ ಇನ್ನೂ ಹೊಸ ನಾಯಕನ ಘೋಷಣೆ ಮಾಡಿಲ್ಲ. ವಿರಾಟ್ ಕೊಹ್ಲಿ ಬಳಿಕ ನಾಯಕನ ಸ್ಥಾನಕ್ಕೆ ಗ್ಲೆನ್ ಮ್ಯಾಕ್ಸ್ ವೆಲ್, ಫಾ ಡು ಪ್ಲೆಸಿಸ್ ಮುಂತಾದ ಕ್ರಿಕೆಟಿಗರ ನಡುವೆ ಪೈಪೋಟಿಯಿದೆ.
ದೇಶೀಯ ಆಟಗಾರರ ಪೈಕಿ ಮೊಹಮ್ಮದ್ ಸಿರಾಜ್ ಇದ್ದರೂ ಅವರಿಗೆ ನಾಯಕತ್ವ ಸಿಗುವ ಸಾಧ‍್ಯತೆಯಿಲ್ಲ. ಹೀಗಾಗಿ ಮ್ಯಾಕ್ಸ್ ವೆಲ್ ಹೆಸರೇ ಮುಂಚೂಣಿಯಲ್ಲಿದೆ.