Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಇತ್ತೀಚೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಗಾಯಾಳುಗಾಳಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೆ ತಂಡಕ್ಕೆ ಸೇರ್ಪಡೆಯಾಗಬೇಕಾದರೆ ಈ ಎಲ್ಲಾ ಕ್ರಿಕೆಟಿಗರು ಬೆಂಗಳೂರಿನಲ್ಲಿರುವ ಎನ್ ಸಿಎ ಕೇಂದ್ರದಲ್ಲಿ ಪುನಶ್ಚೇತನ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಹೀಗಾಗಿ ಈಗ ಎನ್ ಸಿಎ ಮಿನಿ ಟೀಂ ಇಂಡಿಯಾ ಆಗಿದೆ!
ಇತ್ತೀಚೆಗೆ ಗಾಯಗೊಂಡಿದ್ದ ಕೆಎಲ್ ರಾಹುಲ್, ಭುವನೇಶ್ವರ್ ಕುಮಾರ್, ಸೂರ್ಯಕುಮಾರ್ ಯಾದವ್, ದೀಪಕ್ ಚಹರ್ ಮತ್ತು ಶಿಖರ್ ಧವನ್ ಈಗ ಎನ್ ಸಿಎನಲ್ಲಿ ಬೀಡುಬಿಟ್ಟಿದ್ದಾರೆ.
ಈ ಎಲ್ಲಾ ಕ್ರಿಕೆಟಿಗರೂ ಈಗ ಎನ್ ಸಿಎನಲ್ಲಿ ಫಿಟ್ನೆಸ್ ಸಾಬೀತುಪಡಿಸಲು ಶ್ರಮ ವಹಿಸುತ್ತಿದ್ದಾರೆ. ಸದ್ಯಕ್ಕೆ ಇವರೆಲ್ಲರಿಗೂ ಟೀಂ ಇಂಡಿಯಾ ಸರಣಿಯಿಲ್ಲ. ಆದರೆ ಐಪಿಎಲ್ ಗೆ ಮೊದಲು ತಮ್ಮ ತಮ್ಮ ಫ್ರಾಂಚೈಸಿಗೆ ಹಾಜರಾಗಲು ಗಾಯದಿಂದ ಚೇತರಿಸಿಕೊಳ್ಳುವುದು ಅನಿವಾರ್ಯವಾಗಿದೆ.