Select Your Language

Notifications

webdunia
webdunia
webdunia
webdunia

ನಂ.1 ಆದ ಆಲ್ ರೌಂಡರ್ ರವೀಂದ್ರ ಜಡೇಜಾ

ನಂ.1 ಆದ ಆಲ್ ರೌಂಡರ್ ರವೀಂದ್ರ ಜಡೇಜಾ
ದುಬೈ , ಬುಧವಾರ, 9 ಮಾರ್ಚ್ 2022 (16:46 IST)
ದುಬೈ: ಐಸಿಸಿ ಲೇಟೆಸ್ಟ್ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ನಂ.1 ಸ್ಥಾನಕ್ಕೇರಿದ್ದಾರೆ.

ಶ್ರೀಲಂಕಾ ವಿರುದ್ಧ ಮೊಹಾಲಿ ಟೆಸ್ಟ್ ನಲ್ಲಿ ಅಜೇಯ 175 ರನ್ ಮತ್ತು 9 ವಿಕೆಟ್ ಕಬಳಿಸಿದ್ದ ಜಡೇಜಾ ಜೇಸನ್ ಹೋಲ್ಡರ್ ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ. ಆದರೆ ಇನ್ನೊಬ್ಬ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅರ್ಧಶತಕ, ಬೌಲಿಂಗ್ ನಲ್ಲಿ 6 ವಿಕೆಟ್ ಕಬಳಿಸಿಯೂ ಒಂದು ಸ್ಥಾನಕ್ಕೆ ಕೆಳಕ್ಕಿಳಿದಿದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇನ್ನು ಬ್ಯಾಟರ್ ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡು ಸ್ಥಾನ ಮೇಲಕ್ಕೇರಿ ಐದನೇ ಸ್ಥಾನದಲ್ಲಿದ್ದು, ರಿಷಬ್ ಪಂತ್ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ರನ್ ಗಳಿಸುವಲ್ಲಿ ವಿಫಲರಾದ ಕಾರಣ 6 ನೇ ಸ್ಥಾನಕ್ಕೆ ಕುಸಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆ ಪುತ್ರನ ಪುಸ್ತಕ ಬಿಡುಗಡೆ ಮಾಡಿದ ವಿವಿಎಸ್ ಲಕ್ಷ್ಮಣ್