Publish Date: Sat, 07 Aug 2021 (09:21 IST)
Updated Date: Sat, 07 Aug 2021 (09:25 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಬಹುತೇಕ ಮಳೆಗೆ ಆಹುತಿಯಾಗುತ್ತಿದೆ. ನಿನ್ನೆಯೂ ಮಳೆಯಿಂದಾಗಿ ದಿನದ ಮೊದಲು ಮತ್ತು ಕೊನೆಯಲ್ಲಿ ಆಟ ಸ್ಥಗಿತಗೊಂಡಿತು.
ನಿನ್ನೆಯ ದಿನದಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 25 ರನ್ ಗಳಿಸಿದರೆ ಭಾರತ ಮೊದಲ ಇನಿಂಗ್ಸ್ ನಲ್ಲಿ 278 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ 95 ರನ್ ಗಳ ಮಹತ್ವದ ಮುನ್ನಡೆ ಪಡೆದಿತ್ತು.
ಆದರೆ ಈಗ ಮಳೆಯಿಂದಾಗಿ ಪೂರ್ತಿ ಓವರ್ ಗಳ ಪಂದ್ಯ ನಡೆಯಲು ಅಸಾಧ‍್ಯವಾಗಿದ್ದು, ಭಾರತಕ್ಕೆ ಇದರಿಂದ ದೊಡ್ಡ ನಷ್ಟವಾಗಲಿದೆ. ಅತ್ತ ಇಂಗ್ಲೆಂಡ್ ಇದೀಗ ನಿಧಾನಗತಿಯ ಬ್ಯಾಟಿಂಗ್ ನಡೆಸುತ್ತಿದ್ದು, ಇಂದು ದಿನಪೂರ್ತಿ ಆಟ ನಡೆಯದೇ ಅತ್ತ ಇಂಗ್ಲೆಂಡ್ ಬೇಗನೇ ಆಲೌಟ್ ಆಗದೇ ಇದ್ದರೆ ಈ ಪಂದ್ಯ ನೀರಸ ಡ್ರಾದತ್ತ ಸಾಗಲಿದೆ.